alex Certify ಮಾಜಿ ಬಾಯ್ ‌ಫ್ರೆಂಡ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಬಾಯ್ ‌ಫ್ರೆಂಡ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಕಂಗನಾ

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ಕಂಗಣಾ ರಣಾವತ್‌ ತಮ್ಮ ಮಾಜಿ ಬಾಯ್‌ಫ್ರೆಂಡ್‌ಗಳು ಎನ್ನಲಾದ ಹೃತಿಕ್ ರೋಷನ್ ಹಾಗು ಆದಿತ್ಯ ಪಂಚೋಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಮ್ಮ ಸಿಟ್ಟನ್ನು ಕಾರಿಕೊಂಡಿರುವ ಕಂಗನಾ, ಟ್ವಿಟರ್‌ನಲ್ಲಿ ಪೊಸ್ಟ್ ಮಾಡಿದ ವೇಳೆ ಹೀಗೆ ಹೇಳಿಕೊಂಡಿದ್ದಾರೆ.

“ಮಹಾರಾಷ್ಟ್ರ ಸರ್ಕಾರದಿಂದ ನಾನು ಎದುರಿಸಿದ ನ್ಯಾಯಾಂಗ ಪ್ರಕರಣಗಳು, ಅವಮಾನಗಳು, ಅಪಮಾನಗಳು ಹಾಗೂ ಆಪಾದನೆಗಳನ್ನು ನೋಡಿದರೆ, ಬಾಲಿವುಡ್ ಮಾಫಿಯಾ ಹಾಗೂ ಆದಿತ್ಯ ಪಂಚೋಲಿ ಹಾಗೂ ಹೃತಿಕ್ ರೋಷನ್‌ರಂಥ ಜನರೇ ಮೃದು ಹೃದಯಿಗಳು ಎನಿಸುವಂತೆ ಮಾಡಿದೆ. ನನ್ನ ಬಗ್ಗೆ ಕೇಳಿದರೇ ಬೆಚ್ಚಿ ಬೀಳುವಂಥದ್ದು ಅಂಥದ್ದೇನಿದೆ ಎಂದು ನನಗೂ ಆಶ್ಚರ್ಯವಾಗುತ್ತಿದೆ” ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...