ದಕ್ಷಿಣ ಭಾರತದ ನಟಿ ಕಾಜಲ್ ಅಗರ್ವಾಲ್ ತಮ್ಮ ವಿವಾಹಕ್ಕೆ ಒಂದು ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಪತಿ ಗೌತಮ್ ಕಿಚ್ಚು ಜೊತೆ ಮದುವೆ ಸಂದರ್ಭದಲ್ಲಿ ತೆಗೆದ ಅಪರೂಪದ ಕ್ಯಾಂಡೀಡ್ ಫೋಟೋಗಳನ್ನ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ.
ಕಾಜಲ್ ಹಾಗೂ ಗೌತಮ್ ಜೋಡಿ ಅಕ್ಟೋಬರ್ 30ರಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಗೌತಮ್ ಕೂಡ ಕೆಲದಿನಗಳ ಹಿಂದಷ್ಟೇ ಕಾಜಲ್ ಜೊತೆಗಿನ ಕೆಲ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಕೊರೊನಾ ವೈರಸ್ ನಿರ್ಬಂಧನೆಗಳ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ತಮ್ಮ ಮದುವೆಗೆ ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಿತ್ತು. ಕೆಲ ದಿನಗಳ ಹಿಂದಷ್ಟೇ ನವದಂಪತಿ ಮಾಲ್ಡೀವ್ಸ್ಗೆ ಹನಿಮೂನ್ಗೆ ಸಹ ಹೋಗಿ ಬಂದಿದ್ರು.
https://www.instagram.com/p/CIM4S6xHJaC/?utm_source=ig_web_copy_link
https://www.instagram.com/p/CIM2VgbnV6r/?utm_source=ig_web_copy_link
https://www.instagram.com/p/CIM8EBQHDHH/?utm_source=ig_web_copy_link