alex Certify ಮಾಜಿ ಗೆಳತಿ ಸಾವಿನ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಬಾಲಿವುಡ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಗೆಳತಿ ಸಾವಿನ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಬಾಲಿವುಡ್ ನಟ

ಬಾಲಿವುಡ್​ ಹಿರಿಯ ನಟ ಕಬೀರ್​ ಬೇಡಿ ತಮ್ಮ ಆತ್ಮಚರಿತ್ರೆಯ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೊರೊನಾ ವೈರಸ್​ ಲಾಕ್​ಡೌನ್​​ ಸಂದರ್ಭದಲ್ಲಿ ಬರೆದಿರುವ ಆತ್ಮಚರಿತ್ರೆ ‘ಸ್ಟೋರೀಸ್​ ಐ ಮಸ್ಟ್​ ಟೆಲ್’​​​ ನಲ್ಲಿ ಕೆಲ ಆಘಾತಕಾರಿ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.

ಈ ಪುಸ್ತಕದಲ್ಲಿ 74 ವರ್ಷದ ಹಿರಿಯ ನಟ ಯಾರಿಗೂ ತಿಳಿದಿರದ ಕೆಲ ನಿಗೂಢ ವಿಚಾರಗಳ ಬಗ್ಗೆ ಬರೆದಿದ್ದಾರೆ. ಅದರಲ್ಲಿ ತಮ್ಮ ಮಾಜಿ ಗೆಳತಿ ಪರ್ವೀನ್​​ರ ಸಾವಿನ ಬಗ್ಗೆ ಕೆಲ ಆಘಾತಕಾರಿ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಪರ್ವೀನ್​​ 2005 ಜನವರಿ 22ರಲ್ಲಿ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ನಾಲ್ಕು ದಿನಗಳಿಂದ ಮನೆಯ ಬಾಗಿಲಲ್ಲೇ ಇದ್ದ ದಿನಪತ್ರಿಕೆ ಹಾಗೂ ಹಾಲಿನ ಪ್ಯಾಕೆಟ್​ ಒಳಗೆ ತೆಗೆದುಕೊಂಡು ಹೋಗದೇ ಇದ್ದ ಕಾರಣ ಶಂಕೆ ಬಂದು ಪೊಲೀಸರು ಬಾಗಿಲು ಒಡೆದ ವೇಳೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿತ್ತು.

ಕೂಪರ್​ ಆಸ್ಪತ್ರೆ ನೀಡಿರುವ ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಆಕೆಯ ಹೊಟ್ಟೆಯಲ್ಲಿ ಯಾವುದೇ ವಿಷಕಾರಿ ಆಹಾರ ಪತ್ತೆಯಾಗಿಲ್ಲ. ಆದರೆ ಆಲ್ಕೋಹಾಲ್​ ಅಂಶ ಪತ್ತೆಯಾಗಿದೆ. ಬಹುಶಃ ಎರಡ್ಮೂರು ದಿನಗಳಿಂದ ಹೊಟ್ಟೆಗೆ ಏನು ತೆಗೆದುಕೊಳ್ಳದೇ ಇರೋದ್ರಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು.

ಪರ್ವೀನ್​ ಅಂತ್ಯಕ್ರಿಯೆ ವೇಳೆ ಹಾಜರಿದ್ದ ಕಬೀರ್​ ಈ ವಿಚಾರಗಳ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಆಕೆ ಸತ್ತು ನಾಲ್ಕು ದಿನಗಳ ಬಳಿಕ ಜುಹು ನಿವಾಸದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಒಂದು ಕಾಲದಲ್ಲಿ ಲಕ್ಷಾಂತರ ಮಂದಿಯ ಹೃದಯ ಕದ್ದಿದ್ದ ನಟಿ ಗ್ಯಾಂಗ್ರೀನ್​ನಿಂದ ಕಾಲು ಕಳೆದುಕೊಂಡಿದ್ರು. ಆಕೆಯ ಹಾಸಿಗೆಯ ಬಳಿ ವ್ಹೀಲ್​ ಚೇರ್​ ಇತ್ತು. ಆಕೆ ದುರಂತವಾಗಿ ಅಂತ್ಯ ಕಂಡಿದ್ದಳು. ಆಕೆಯನ್ನ ಪ್ರೀತಿಸಿದ್ದ ಮಹೇಶ್​, ಡ್ಯಾನಿ ಹಾಗೂ ನಾನು ಅಂತ್ಯಕ್ರಿಯೆಯಲ್ಲಿ ಹಾಜರಿದ್ದೆವು.

ಆಕೆಯನ್ನ ಇಸ್ಲಾಮಿಕ್​ ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಲಾಯ್ತು. ಆಕೆಯ ದೇಹವನ್ನ ಕುಟುಂಬಸ್ಥರ ಜೊತೆ ನಾವೇ ಸಾಗಿಸಿದ್ದೆವು ಎಂದು ಬರೆದಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಕಬೀರ್​ ತಮ್ಮ ಪತ್ನಿ​ ಜೊತೆ ಮುಂಬೈನಲ್ಲಿ ವಾಸವಿದ್ದಾರೆ. ಈಗಲೂ ನಟನೆ, ಕಂಠದಾನ ಹಾಗೂ ಡಾಕ್ಯೂಮೆಂಟರಿಗಳನ್ನ ಮಾಡುತ್ತಾರೆ. ಸಾಮಾಜಿಕ ಕಾರ್ಯಗಳ ಮೂಲಕವೂ ಕಬೀರ್​ ಸುದ್ದಿಯಲ್ಲಿ ಇರ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...