ನಟ ಜ್ಯೂ. ಎನ್ ಟಿ ಆರ್ಗೆ ಕೊರೊನಾ ಸೋಂಕು ದೃಢ….! 10-05-2021 6:33PM IST / No Comments / Posted In: Featured News, Entertainment ನಟ ಜ್ಯೂನಿಯರ್ ಎನ್ಟಿಆರ್ಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ನಟ ಜ್ಯೂ. ಎನ್ಟಿಆರ್ ಸೋಶಿಯಲ್ ಮೀಡಿಯಾ ವೇದಿಕೆಯ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಯಾರೂ ತಲೆಕೆಡಿಸಿಕೊಳ್ಳಬೇಡಿ. ನಾನು ಚೆನ್ನಾಗಿಯೇ ಇದ್ದೇನೆ. ನಾನು ಹಾಗೂ ನನ್ನ ಕುಟುಂಬಸ್ಥರು ಸದ್ಯ ಐಸೋಲೇಷನ್ನಲ್ಲಿ ಇದ್ದೇವೆ. ವೈದ್ಯರ ಮಾರ್ಗದರ್ಶನದಲ್ಲಿ ನಾವು ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡುತ್ತಿದ್ದೇವೆ. ನನ್ನ ಜೊತೆ ಸಂಪರ್ಕಕ್ಕೆ ಬಂದವರು ದಯಮಾಡಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ಟ್ವೀಟಾಯಿಸಿದ್ದಾರೆ. ಜ್ಯೂ. ಎನ್ಟಿಆರ್ ಕಳೆದ ಕೆಲ ದಿನಗಳ ಹಿಂದಷ್ಟೇ ಕನ್ನಡ ಭಾಷೆಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಸುದ್ದಿ ಮಾಡಿದ್ದರು. ಜ್ಯೂ. ಎನ್ಟಿಆರ್ ತಾಯಿ ಶಾಲಿನಿ ಭಾಸ್ಕರ್ ರಾವ್ ಕುಂದಾಪುರ ಮೂಲದವಾಗಿರೋದ್ರಿಂದ ಇವರಿಗೂ ಕನ್ನಡ ಭಾಷೆ ಮಾತನಾಡಲು ಬರುತ್ತದೆ. ಇದು ಮಾತ್ರವಲ್ಲದೇ ತೆಲಗು ಬಿಗ್ಬಾಸ್ ಶೋನಲ್ಲಿ ಸ್ಪರ್ಧಿಗಳ ಜೊತೆ ಕನ್ನಡ ಭಾಷೆಯಲ್ಲಿ ಮಾತನಾಡೋದು ಹಾಗೂ ಪುನೀತ್ ರಾಜಕುಮಾರ್ ಅಭಿನಯದ ಸಿನಿಮಾದಲ್ಲಿ ಗೆಳೆಯ ಗೆಳೆಯ ಹಾಡಿಗೆ ದನಿಯಾಗಿದ್ದು ಸೇರಿದಂತೆ ಹಲವು ಬಾರಿ ಕನ್ನಡಾಭಿಮಾನ ತೋರುವ ಮೂಲಕ ಕನ್ನಡಿಗರ ಮನವನ್ನ ಗೆಲ್ಲುತ್ತಲೇ ಇದ್ದಾರೆ.