ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಸಿನಿಮಾ ಗುಡ್ ಲಕ್ ಜೆರ್ರಿಯ ಶೂಟಿಂಗ್ ವೇಳೆಯಲ್ಲಿ ಕ್ಲಿಕ್ಕಿಸಿದ ಕೆಲ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ದಿಲ್ ವಾಲೇ ದುಲ್ಹನಿಯಾ ಸಿನಿಮಾವನ್ನ ನೆನಪಿಸುವಂತಿದೆ.
ದಿಲ್ವಾಲೇ ದುಲ್ಹನಿಯಾ ಸಿನಿಮಾದಲ್ಲಿ ಕಾಜಲ್ ಹಾಗೂ ಶಾರೂಕ್ ಖಾನ್ ಪಂಜಾಬ್ನಲ್ಲಿ ಭೇಟಿಯಾದ ದೃಶ್ಯದ ವೇಳೆ ಕಾಜಲ್ ಧರಿಸಿದ ಸಲ್ವಾರ್ ರೀತಿಯಲ್ಲೇ ಜಾನ್ವಿ ಕೂಡ ತಯಾರಾಗಿದ್ದಾರೆ. ಹಾಗೂ ಶಾರೂಖ್ ಹಾಗೂ ಕಾಜಲ್ ಇದೇ ರೀತಿಯ ಸಾಸಿವೆ ಗಿಡದ ಜಮೀನಿನಲ್ಲೇ ದೃಶ್ಯವನ್ನ ಚಿತ್ರಿಕರಿಸಿದ್ದರು ಅನ್ನೋದನ್ನೂ ನಾವಿಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ. ಈ ಎಲ್ಲಾ ಫೋಟೋಗಳಿಗೆ ಜಾನ್ವಿ, ಬಹುಶಃ ಸ್ವಲ್ಪ ಸಿನಿಮೀಯ ರೀತಿಯಲ್ಲಿರಬಹುದು ಎಂದು ಶೀರ್ಷಿಕೆ ನೀಡಿದ್ದಾರೆ.
ಮಂಗಳವಾರ ಜಾನ್ವಿ ಮತ್ತೊಂದಷ್ಟು ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ದೇಶ ಪ್ರೇಮವನ್ನ ಸಾರಿದ್ದಾರೆ. ನಾನು ಪ್ರಪಂಚದ ಬಹುತೇಕ ಕಡೆ ಪ್ರಯಾಣ ಮಾಡಿದ್ದೇನೆ. ಆದರೆ ಭಾರತದಲ್ಲಿ ಸಿಗುವಷ್ಟು ಸಂತೋಷ ನನಗೆ ಇನ್ನೆಲ್ಲೂ ಸಿಗೋದಿಲ್ಲ. ಕೋಟೆಯೊಂದರಲ್ಲಿ ನಟಿ ಜಾನ್ವಿ ಕ್ಲಿಕ್ಕಿಸಿದ ಫೋಟೋಗಳನ್ನ ಶೇರ್ ಮಾಡಿ ಈ ರೀತಿಯ ಶೀರ್ಷಿಕೆ ನೀಡಿದ್ದಾರೆ.
https://www.instagram.com/p/CK1NIlPFEk8/?utm_source=ig_web_copy_link
https://www.instagram.com/p/CKx-tdJl7Mx/?utm_source=ig_web_copy_link