alex Certify ಸಹೋದರನಿಂದ ಕಟ್ಟಿಂಗ್‌ ಮಾಡಿಸಿಕೊಂಡ ಅನುಪಮ್ ಖೇರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನಿಂದ ಕಟ್ಟಿಂಗ್‌ ಮಾಡಿಸಿಕೊಂಡ ಅನುಪಮ್ ಖೇರ್

ಬಾಲಿವುಡ್ ನಟ ಅನುಪಮ್ ಖೇರ್ ಗೆ ತಮ್ಮ ಸಹೋದರನೇ ಕಟ್ಟಿಂಗ್ ಮಾಡಿದ್ದಾರೆ.

ಹೌದು, ಮುಂಬೈನ ತಮ್ಮ ಮನೆಯಲ್ಲಿ ಟ್ರಿಮ್ಮರ್ ಮೂಲಕ ತಮ್ಮ ರಾಜು ಖೇರ್ ಕ್ಷೌರ ಮಾಡುವ ಮಾಡುತ್ತಿರುವ ವಿಡಿಯೋವನ್ನ ಅನುಪಮ್ ಟ್ವಿಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ.

ಬಾತ್ ರೂಮ್ ಅಲ್ಲಿ ಕನ್ನಡಿ ಮುಂದೆ ನಿಂತು ಟ್ರಿಮ್ ಮಾಡಿಸಿಕೊಳ್ಳುವ ವಿಡಿಯೋ ಸಖತ್ ವೈರಲ್ ಆಗಿದ್ದು, 4.16 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಹೆಡ್ ಟ್ರಿಮ್ಮಿಂಗ್ ಮುಗಿದ ತಕ್ಷಣ ರಾಜು ಅವರು, ಮುಗಿಯಿತು ಎನ್ನುತ್ತಾರೆ. ಇದನ್ನ ಕೇಳಿದ ಅನುಪಮ್, ಜಲ್ದಿ ಹೋಗಯ, ಜಲ್ದಿ ಹೋಗಯ ಎಂದು ನಗುತ್ತಾರೆ. ಇಬ್ಬರ ಮ್ಯಾನರಿಸಂ ನಗೆ ತರಿಸುವಂತಿದೆ.

ನಾವು ಬೊಕ್ಕ ತಲೆಯವರಲ್ಲ (ವಿ ಆರ್ ನಾಟ್ ಬಾಲ್ಡ್), ನಮ್ಮ ಕೂದಲಿಗಿಂತ ನಾವು ಎತ್ತರದಲ್ಲಿ ಇರುವವರು (ವಿ ಆರ್ ಜಸ್ಟ್ ಟಾಲರ್ ದೆನ್ ಅವರ್ ಹೇರ್) ಎಂದು ಬರೆದುಕೊಂಡು, ಬ್ರದರ್ಸ್, ಜಲ್ದಿ ಹೋಗಯ ಎಂಬುದನ್ನು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...