ಮಡಿಕೇರಿ: ಹಿರಿಯ ನಟ ಜೈಜಗದೀಶ್ ಅವರಿಗೆ ಬರೋಬ್ಬರಿ 2.32 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪದ ಬಳಿ ಜೈಜಗದೀಶ್ 10 ಎಕರೆ ಜಮೀನು ಹೊಂದಿದ್ದಾರೆ.
ಜಮೀನಿನಲ್ಲಿ ಅವರು 5 ಹೆಚ್.ಪಿ. ಮೋಟರ್ ಅಳವಡಿಸಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಪಂಪ್ ಬಳಸಲಾಗಿದ್ದು ಅಚ್ಚರಿ ಎನ್ನುವಂತೆ 2.32 ಲಕ್ಷ ರೂಪಾಯಿ ಬಿಲ್ ಬಂದಿದೆ. ಅವರು ಈ ಕುರಿತಾಗಿ ಸಂಬಂಧಿಸಿದ ಚೆಸ್ಕಾಂ ಅಧಿಕಾರಿಗಳು ಮತ್ತು ಸಂಸದರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.