alex Certify BIG BREAKING: ಜಗ್ಗೇಶ್ ಗೆ ಸಾರಿ ಕೇಳಿದ ದರ್ಶನ್ – ಆಡಿಯೋ ವಿವಾದ, ದೊಡ್ಡತನ ತೋರಿದ ‘ದಾಸ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಜಗ್ಗೇಶ್ ಗೆ ಸಾರಿ ಕೇಳಿದ ದರ್ಶನ್ – ಆಡಿಯೋ ವಿವಾದ, ದೊಡ್ಡತನ ತೋರಿದ ‘ದಾಸ’

ನಟ ನವರಸನಾಯಕ ಜಗ್ಗೇಶ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರಿ ಕೇಳಿದ್ದಾರೆ. ಸೆಲೆಬ್ರಿಟಿಗಳ(ಅಭಿಮಾನಿಗಳ) ಪರವಾಗಿ ನಾನು ಸಾರಿ ಕೇಳುತ್ತೇನೆ. ಜಗ್ಗೇಶ್ ಅವರು ಸೀನಿಯರ್. ಅವರೇ ಮುಂದೆ. ನಾವು ಅವರ ಹಿಂದೆ ಇರುತ್ತೇವೆ. ಅವರು ಏನೇ ಮಾತಾಡಿದರೂ ನಮ್ಮ ಬಗ್ಗೆ ತಾನೇ ಮಾತಾಡಿದ್ದಾರೆ ಎಂದು ದರ್ಶನ್ ದೊಡ್ಡಗುಣ ತೋರಿಸಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದ ದರ್ಶನ್ ದೊಡ್ಡತನ ಮೆರೆದಿದ್ದಾರೆ.

ನಿರ್ಮಾಪಕರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಜಗ್ಗೇಶ್ ಅವರು ದರ್ಶನ್ ಕುರಿತಾಗಿ ಆಡಿದ ಮಾತು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್ ಕೂಡ ನಂತರದಲ್ಲಿ ಅಸಮಾಧಾನ ಹೊರ ಹಾಕಿದ್ದರು.

ಇದರ ಬಗ್ಗೆ ದರ್ಶನ್ ಅವರಿಗೆ ಏನೇನೂ ಗೊತ್ತಿರಲಿಲ್ಲ. ಘಟನೆ ತಮ್ಮ ಗಮನಕ್ಕೆ ಬರುತ್ತಲೇ ದರ್ಶನ್ ಅವರು ಜಗ್ಗೇಶ್ ಅವರಿಗೆ ಸಾರಿ ಕೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ದರ್ಶನ್ ಅವರು ಏನೇ ಮಾತನಾಡಿದರೂ ನಮ್ಮ ಸೆಲೆಬ್ರಿಟಿಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ದೊಡ್ಡತನ ತೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...