ಲಾಕ್ ಡೌನ್ ಸಮಯದಲ್ಲಿ ಕ್ರೀಡಾಪಟುಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಏನು ಮಾಡುತ್ತಿರುತ್ತಾರೆಂಬ ಕುತೂಹಲ ಜನ ಸಾಮಾನ್ಯರಿಗಿರುತ್ತದೆ. ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಾಗಿ ಅವರೆಲ್ಲ ತಮ್ಮ ಎಚ್ಚರಿಕೆಯಲ್ಲಿ ತಾವಿರುತ್ತಾರೆ.
ಅಂಥದ್ದರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ವಿಡಿಯೋ ವೊಂದು ಸದ್ದು ಮಾಡಿದೆ. ಮುಂಬೈನಲ್ಲಿ ಲಾಕ್ಡೌನ್ ವೇಳೆ ಮಾಸ್ಕ್ ಧರಿಸಿದ್ದ ರಾಕುಲ್ ಪ್ರೀತ್, ಕೈಯಲ್ಲಿ ಬಾಟಲ್ ಹಿಡಿದು ರಸ್ತೆ ದಾಟುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನೇಕರು ರಾಕುಲ್ ಆಲ್ಕೊಹಾಲ್ ಖರೀದಿಸಿದರೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ರಾಕುಲ್, ಮೆಡಿಕಲ್ ಶಾಪ್ ನಲ್ಲಿ ಆಲ್ಕೊಹಾಲ್ ಸಿಗುತ್ತದೆಯೇ ಎಂದು ಆ ವಿಡಿಯೋದೊಂದಿಗೆ ಪ್ರಶ್ನೆ ಎತ್ತಿ ಟೀಕಾಕಾರರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ. ಈ ನಡುವೆ ಸಾಕಷ್ಟು ಮಂದಿ ಈ ವಿಡಿಯೋವನ್ನು ಶೇರ್ ಮಾಡಿ, ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಕುಲ್ ಮೆಡಿಕಲ್ ಶಾಪ್ ನಿಂದ ಬಂದಿರುವುದು ಕಾಣಿಸುತ್ತದೆ.