
ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ತಮ್ಮ ಬೋಲ್ಡ್ ಕ್ಯಾರೆಕ್ಟರ್ ಮೂಲಕವೇ ಸದಾ ಸುದ್ದಿಯಲ್ಲಿ ಇರ್ತಾರೆ. ತನ್ನ ವರ್ಕೌಟ್ ಸೆಷನ್, ಯೋಗಾ ಕಲೆಯ ಮೂಲಕ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ಗಳನ್ನ ಹಾಕ್ತಾನೇ ಇರ್ತಾರೆ.
ಆದರೆ ಈ ಬಾರಿ ಶೆರ್ಲಿನ್ ಮಧುಮಗಳ ರೀತಿಯಲ್ಲಿ ಅಲಂಕರಿಸಿಕೊಂಡು ವಿಡಿಯೋ ಪೋಸ್ಟ್ ಮಾಡುವ ಮೂಲಕ ಫಾಲೋವರ್ಸ್ಗೆ ಚಮಕ್ ನೀಡಿದ್ದಾರೆ.
ಶೆರ್ಲಿನ್ ಇನ್ಸ್ಟಾ ಖಾತೆ ನೋಡಿದ ಅನೇಕ ಅಭಿಮಾನಿಗಳು ಇವರಿಗೆ ಮದುವೆ ಆಗೋಯ್ತಾ ಅಂತ ತಲೆಕೆಡಿಸಿಕೊಂಡಿದ್ದಾರೆ. ಬಳಿಕ ಶೆರ್ಲಿನ್ ತಮ್ಮ ಕಿರು ಚಿತ್ರವೊಂದರ ಶೂಟಿಂಗ್ ವೇಳೆ ಈ ರೀತಿ ರೆಡಿಯಾಗಿದ್ರು ಅನ್ನೋ ವಿಚಾರ ಗೊತ್ತಾಗಿದೆ.