![](https://kannadadunia.com/wp-content/uploads/2021/03/WhatsApp-Image-2021-03-12-at-11.05.33-AM.jpeg)
ಆರ್ಶಿ ಖಾನ್ ಸೋಮವಾರ ರಾತ್ರಿ ತಮ್ಮ ನೂತನ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಮನೆಯ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡಿದ್ದಾರೆ. ನಾನು ಚಂದ್ರನ ಅಂಗಳದಲ್ಲಿ ಮನೆ ಖರೀದಿ ಮಾಡಿದ್ದೇನೆ ಎಂದು ಭಾಸವಾಗ್ತಿದೆ ಎಂದು ಆರ್ಶಿ ಖಾನ್ ಸಂತಸ ಹೊರಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರ ಶೇರ್ ಮಾಡಿರುವ ನಟಿ ಆರ್ಶಿ ಖಾನ್, ನಾನು ಮುಂಬೈಗೆ ಬಂದಾಗಿನಿಂದಲೂ ಬಾಡಿಗೆ ಮನೆಯಲ್ಲೇ ವಾಸವಾಗಿದ್ದೆ. ಮುಂಬೈನಲ್ಲೊಂದು ಮನೆ ಖರೀದಿ ಮಾಡಬೇಕು ಅನ್ನೋದು ನನ್ನ ಕನಸಾಗಿತ್ತು. ಭಾನುವಾರ ರಾತ್ರಿಯವರೆಗೆ ನಾನು ಬಾಡಿಗೆ ಮನೆಯಲ್ಲೇ ಇದ್ದೆ. ಆದರೆ ಇದೀಗ ನನ್ನ ಸ್ವಂತ ಮನೆಯನ್ನ ನೋಡ್ತಿದ್ರೆ ನನ್ನ ಮೇಲೆ ನನಗೆ ಹೆಮ್ಮೆ ಎನಿಸುತ್ತೆ. ನಾನು ಚಂದ್ರನ ಅಂಗಳದಲ್ಲಿ ಮನೆ ಖರೀದಿ ಮಾಡಿದ್ದೇನೆ ಎಂದೆನಿಸುತ್ತಿದೆ ಎಂದು ಹೇಳಿದ್ರು.
ದೇವರು ಎಂದಿಗೂ ನನ್ನ ಪರವಾಗಿದ್ದಾನೆ. ನನ್ನ ಪೋಷಕರು ಕೂಡ ನನ್ನ ಪ್ರತಿ ಹೆಜ್ಜೆಯ ಮೇಲೂ ನಂಬಿಕೆ ಇಟ್ಟಿದ್ದಾರೆ. ಅಲ್ಲದೇ ಸಲ್ಮಾನ್ ಖಾನ್ ಹಾಗೂ ಬಿಗ್ ಬಾಸ್ ಶೋಗೆ ನನ್ನ ವಿಶೇಷ ಧನ್ಯವಾದ ಹೇಳಿದ್ದಾರೆ.
https://www.instagram.com/p/CLuC54jJOLg/?utm_source=ig_embed
![](https://cdn.siasat.com/wp-content/uploads/2021/03/2.png)
![](https://cdn.siasat.com/wp-content/uploads/2021/03/4.png)
![](https://cdn.siasat.com/wp-content/uploads/2021/03/3-1.png)