alex Certify ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಶಾಂತ್‌ ಸಿಂಗ್‌ ಮಾಜಿ ಗೆಳತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಶಾಂತ್‌ ಸಿಂಗ್‌ ಮಾಜಿ ಗೆಳತಿ

ಬಾಲಿವುಡ್​ ಹಾಗೂ ಕಿರುತೆರೆ ಎರಡರಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟಿ ಅಂಕಿತಾ ಲೋಖಂಡೆ ಇಂದು ತಮ್ಮ 36ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮದಲ್ಲಿದ್ದಾರೆ.

ತಮ್ಮ ಗೆಳೆಯ ವಿಕ್ಕಿ ಜೈನ್​ ಜೊತೆ ಹುಟ್ಟುಹಬ್ಬವನ್ನ ಆಚರಿಸಿಕೊಂಡಿರುವ ನಟಿ ಅಂಕಿತಾ ಈ ಫೋಟೋಗಳನ್ನ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪವಿತ್ರ ರಿಶ್ತಾ ಧಾರವಾಹಿ ಮೂಲಕ ಹೆಸರು ಗಳಿಸಿದ ನಟಿ ಅಂಕಿತಾ ಲೋಖಂಡೆ ಬಾಲಿವುಡ್​ನ ಕೆಲ ಸಿನಿಮಾಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಮಣಿಕರ್ಣಿಕಾ, ಭಾಗಿ 3 ಸಿನಿಮಾಗಳಲ್ಲಿನ ನಟನೆ ಮೂಲಕವೂ ಅಂಕಿತಾ ಜನಮನ್ನಣೆ ಗಳಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಮಾಜಿ ಗೆಳತಿಯಾಗಿರುವ ಅಂಕಿತಾ, ನಟನ ಸಾವಿನ ತನಿಖೆಯನ್ನ ಸಿಬಿಐಗೆ ಒಪ್ಪಿಸುವಂತೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ನಡೆಸುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು.

View this post on Instagram

A post shared by Ankita Lokhande (@lokhandeankita)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...