ಹೊಸ ತಾಯಿಯಾದ ಮೇಲೆ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಬಂದಿರುವ ದೀಪಾ ಖೋಸ್ಲಾ ಎದೆಹಾಲಿನ ಪಂಪ್ ಅಟ್ಯಾಚ್ ಆಗಿರುವ ಹಳದಿ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ.
ತಾಯ್ತನದ ಕುರಿತಂತೆ ಸಂವಹನ ನಡೆಸಲು ಇಚ್ಛಿಸಿದ ದೀಪಾ ತಮ್ಮ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗುವನ್ನು ಹೆತ್ತು, ಆಡಿಸಿ ಬೆಳೆಸುವುದೆಂದರೆ ತಾಯಂದಿರು ಏನೆಲ್ಲಾ ಮಾಡಬೇಕೆಂದು ಜಾಗೃತಿ ಮೂಡಿಸುವ ಉದ್ದೇಶದಿಂದ ದೀಪಾ ಈ ಥೀಂನ ಉಡುಪು ಧರಿಸಿದ್ದಾರೆ.
ಹೊಸ ತಾಯಂದಿರಿಗೆ ಬಹಳ ಮುಖ್ಯವಾದ ಈ ವಸ್ತುವನ್ನು ಬಟ್ಟೆಯೊಂದಿಗೆ ಅಕ್ಸೆಸರಿಯಾಗಿ ಸೇರಿಸಲಾಗಿತ್ತು. ದೀಪಾ ಈಗ ಸಾಮಾಜಿಕ ಜಾಲತಾಣದ ನೂತನ ಸೆನ್ಸೇಷನ್ ಆಗಿದ್ದಾರೆ.