alex Certify ಬಿಡುಗಡೆಯಾಗಿ 25 ವರ್ಷ ಕಳೆದರೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಈ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾಗಿ 25 ವರ್ಷ ಕಳೆದರೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಈ ಸಿನಿಮಾ

In this major throwback pic from 1995, can you spot Aamir Khan and Manisha  Koirala? | People News | Zee Newsಮನರಂಜನೆಯನ್ನ ಕೊಡುವಂತಹ ಸಿನಿಮಾಗಳು ಸಾವಿರಾರು ಸಿಗಬಹುದು. ಆದರೆ ದಶಕಗಳೇ ಕಳೆದ್ರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯೋ ಸಿನಿಮಾಗಳು ಬೆರಳೆಣಿಕೆಯಷ್ಟು. ಈ ಸಾಲಿಗೆ ಸೇರುವ ಬಾಲಿವುಡ್​​ನ ಸಿನಿಮಾ ಅಂದರೆ ಅಕೇಲೆ ಹಮ್​ ಅಕೇಲೆ ತುಮ್.

1995ರ ಡಿಸೆಂಬರ್​ 1ರಂದು ತೆರೆ ಕಂಡ ಈ ಸಿನಿಮಾ ಬಾಲಿವುಡ್​​ನ ಬಾಕ್ಸಾಫೀಸಿನಲ್ಲಿ ಸಖತ್​ ಸದ್ದು ಮಾಡಿತ್ತು. ಈ ಸಿನಿಮಾದ ಅಭಿಯನಕ್ಕಾಗಿ ಆ ವರ್ಷದ ಫಿಲಂ ಫೇರ್​ ಪ್ರಶಸ್ತಿಗಳಲ್ಲಿ ಮನಿಷಾ ಕೊಯಿರಾಲಾ ಹೆಸರು ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು. ಅನು ಮಲ್ಲಿಕ್​​ ಸಂಗೀತ ಹಾಗೂ ಮಜ್ರೂ ಸುಲ್ತಾನಪುರಿ ಸಾಹಿತ್ಯವಿರುವ ಸಿನಿಮಾ ಹಾಡುಗಳು ಕೂಡ ಸಖತ್​ ಹಿಟ್​ ಆಗಿದ್ದವು.

25 ವರ್ಷದ ಹಿಂದಿನ ಈ ಸಿನಿಮಾದ ಶೂಟಿಂಗ್​​ ಸೀನ್​​ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಫೋಟೋ ನೋಡಿದ ನೆಟ್ಟಿಗರು ಸಿನಿಮಾ ಬಗೆಗಿನ ತಮ್ಮ ಅನುಭವಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಿದ್ದಾರೆ.

https://www.instagram.com/p/CIP4WguB66L/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...