
ಹರಿಯಾಣದಲ್ಲಿ ಇಂಟರ್ನೆಟ್ ಸೌಕರ್ಯವನ್ನ ಸ್ಥಗಿತಗೊಳಿಸಿರುವ ಬಗ್ಗೆ ಸಿಎನ್ಎನ್ ತಯಾರಿಸಿದ ವರದಿಯನ್ನ ಶೇರ್ ಮಾಡಿರುವ ಗಾಯಕಿ, ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ..? ಎಂದು ಪ್ರಶ್ನೆ ಮಾಡಿದ್ದಾಳೆ. ಫಾರ್ಮರ್ ಪ್ರೊಟೆಸ್ಟ್ ಎಂಬ ಹ್ಯಾಶ್ಟ್ಯಾಗ್ನಡಿಯಲ್ಲಿ ಆಕೆ ಈ ಟ್ವೀಟ್ ಮಾಡಿದ್ದಾಳೆ.
ಈ ಟ್ವೀಟ್ ಭಾರತದಲ್ಲೇ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿಬಿಟ್ಟಿದೆ. ರಿಹಾನ್ನಾ ಭಾರತದ ಪ್ರತಿಭಟನೆ ಬಗ್ಗೆ ಮಾತನಾಡುತ್ತಿದ್ದಂತೆಯೇ ಅನೇಕರು ಈ ಟ್ವೀಟ್ನ್ನು ಶೇರ್ ಮಾಡಿದ್ದಾರೆ. ಇದಾದ ಬಳಿಕ ಸಾಕಷ್ಟು ಜೋಕ್, ಮೀಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
https://twitter.com/Nher_who/status/1356634360376483840