ಮುಂಬೈನ ಉಪನಗರ ಜುಹುನಲ್ಲಿ ಬಾಲಿವುಡ್ ನಟ ಸೋನು ಸೂದ್ ನಿರ್ಮಿಸಿದ್ದ ವಸತಿ ಕಟ್ಟಡವನ್ನ ಅಕ್ರಮ ನಿರ್ಮಾಣ ಎಂದು ಆರೋಪಿಸಿ ಬಿಎಂಸಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಮೇಲ್ಮನವಿ ಹಾಗೂ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಸೋನು ಸೂದ್ಗೆ ಮುಂಬೈ ಹೈಕೋರ್ಟ್ನಲ್ಲಿ ಹಿನ್ನಡೆ ಉಂಟಾಗಿದೆ.
ಬಾಲಿವುಡ್ ನಟ ಸೋನು ಸೂದ್ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಮೂರ್ತಿ ಪ್ರಥ್ವಿರಾಜ್ ಚವ್ಹಾಣ್ ನ್ಯಾಯದ ಪರ ಕಾನೂನು ಇರುತ್ತದೆ ಎಂದು ಹೇಳಿದ್ದಾರೆ.
ಸೋನು ಸೂದ್ ಪರ ವಕೀಲ ಅಮೋಘ್ ಸಿಂಗ್ ಬಿಎಂಸಿ ನೀಡಿರುವ ನೋಟಿಸ್ಗೆ ಉತ್ತರ ನೀಡಲು 10 ವಾರಗಳ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಕಟ್ಟಡವನ್ನ ಧ್ವಂಸ ಮಾಡದಂತೆ ಬಿಎಂಸಿಗೆ ನಿರ್ದೇಶನ ನೀಡುವಂತೆ ನ್ಯಾಯಾಯಲಕ್ಕೆ ಕೋರಿದ್ದರು.
ಸೋನು ಸೂದ್ ಮನವಿಯನ್ನ ನಿರಾಕರಿಸಿದ ಕೋರ್ಟ್ ಸೂದ್ಗೆ ಈ ಹಿಂದೆ ಸಾಕಷ್ಟು ಅವಕಾಶಗಳು ಇದ್ದವು ಎಂದು ಹೇಳಿದೆ. ನೀವು ಬಹಳ ತಡವಾಗಿ ಇಲ್ಲಿಗೆ ಬಂದಿದ್ದೀರಾ. ನೀವು ಈ ವಿಚಾರವಾಗಿ ಬಿಎಂಸಿ ಕಚೇರಿಯನ್ನೇ ಭೇಟಿಯಾಗಿ ಎಂದಿದೆ.