ಬಾಲಿವುಡ್ ನಟ ಹೃತಿಕ್ ರೋಷನ್ 2016ರಲ್ಲಿ ಸೈಬರ್ ಸೆಲ್ನಲ್ಲಿ ನೋಂದಾಯಿಸಿದ್ದ ಎಫ್ಐಆರ್ ನ್ನು ಅಪರಾಧ ವಿಭಾಗ ಸಿಐಯುಗೆ ವರ್ಗಾಯಿಸಲಾಗಿದೆ.
ಹೃತಿಕ್ ರೋಷನ್ 2013 ಹಾಗೂ 2014ರಲ್ಲಿ 100 ಇ ಮೇಲ್ಗಳನ್ನ ಸ್ವೀಕರಿಸಿದ್ದರು. ಈ ಬಗ್ಗೆ ಅವರು 2016ರಲ್ಲಿ ಸೈಬರ್ ಸೆಲ್ಗೆ ದೂರು ನೀಡಿದ್ದರು.
ಈ ಎಲ್ಲಾ ಇ ಮೇಲ್ಗಳು ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲ್ ಐಡಿಯಿಂದ ಕಳುಹಿಸಲ್ಪಟ್ಟಿತ್ತು. ಈ ಸಂಬಂಧ ಐಪಿಸಿ ಆರ್/ ಡಬ್ಲೂ 66 ಸಿ ಹಾಗೂ ಡಿ ಸೆಕ್ಷನ್ 419ರ ಅಡಿಯಲ್ಲಿ ಹೃತಿಕ್ ರೋಷನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
2016ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರಿಗೆ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಪತ್ರ ಬರೆದಿದ್ದು ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಹೇಳಿದ್ದರು.