![](https://kannadadunia.com/wp-content/uploads/2020/11/ritikroshan_d.jpg)
ನವೆಂಬರ್ 23ರಂದು ಹೃಷಿಕೇಶ್ ಆಂಗೋಮ್ ಗಂಡು ಮಗುವಿಗೆ ತಂದೆಯಾಗಿದ್ದರು. ಹೃತಿಕ್ ರೋಷನ್ರ ದೊಡ್ಡ ಅಭಿಮಾನಿಯಾಗಿದ್ದ ಹೃಷಿಕೇಶ್ ಮಗುವಿಗೆ ಹೃತಿಕ್ ಎಂದೇ ನಾಮಕರಣ ಮಾಡಿದ್ದರು.
ಇದೀಗ ಮಗುವಿನ ಕೈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಹೃಷಿಕೇಶ್ ನನ್ನ ಮಗನೂ ಕೂಡ ಹೃತಿಕ್ರಂತೆ ಆರು ಬೆರಳನ್ನ ಹೊಂದಿದ್ದಾನೆ ಎಂಬ ವಿಚಾರವನ್ನ ಬಹಿರಂಗಪಡಿಸಿದ್ದಾರೆ.
‘ಕಹೋ ನಾ ಪ್ಯಾರ್ ಹೈ’ ಸಿನಿಮಾ ನೋಡಿದ ಬಳಿಕ ನಾನು ಹೃತಿಕ್ ರೋಷನ್ರ ಅಭಿಮಾನಿಯಾಗಿದ್ದೆ. ಹೀಗಾಗಿ ರಿಷಿಕೇಶ್ ಆಗಿದ್ದ ನನ್ನ ಹೆಸರನ್ನ ಹೃಷಿಕೇಶ್ ಎಂದು ಬದಲಾಯಿಸಿಕೊಂಡೆ. ಇದೀಗ ನನ್ನ ಮಗ ಜನಿಸಿದ್ದು ಆತನಿಗೆ ಹೃತಿಕ್ ಎಂದು ಹಸರಿಡಲಿದ್ದೇನೆ. ಅಲ್ಲದೇ ನನ್ನ ಮಗ ಹೃತಿಕ್ರಂತಹ ಹಸ್ತ ಹೊಂದಿರೋದನ್ನ ಕಂಡು ನಾನು ಸಖತ್ ಖುಷಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.