
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಆಗಮಿಸುತ್ತಿರುವ ದೃಶ್ಯಕ್ಕೆ ಫನ್ನಿ ಹೋಲಿಕೆಯೊಂದನ್ನು ಕೊಟ್ಟು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಿಕ್ ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಶ್ವೇತಭವನಕ್ಕೆ ಬರುತ್ತಿರುವ ಟ್ರಂಪ್‌ರನ್ನು, ಹಿಂದಿಯ ’ಕಭಿ ಖುಷಿ ಕಭಿ ಗಮ್’ ಚಿತ್ರದಲ್ಲಿ ಶಾರುಖ್ ಖಾನ್ ತಮ್ಮ ಮನೆಗೆ ಬರುತ್ತಿರುವ ದೃಶ್ಯದೊಂದಿಗೆ ತುಲನೆ ಮಾಡಲಾಗಿದೆ.
ಈ ವಿಡಿಯೋವನ್ನು ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದ್ದು, ಭರ್ಜರಿಯಾಗಿ ಪ್ರತಿಕ್ರಿಯೆ ಗಿಟ್ಟಿಸುತ್ತಿದೆ.