
ರಾಕ್ ಮ್ಯೂಸಿಕ್ ಅಪ್ಪಟ ಅಭಿಮಾನಿಯಾದ ಈಕೆ ತನ್ನ ಮೂವರು ಮಕ್ಕಳಿಗೆ ಮೆಟಲಿಕಾ, ಸ್ಲೇಯರ್ ಹಾಗೂ ಪ್ಯಾಂಟೆರಾ ಎಂದು ನಾಮಕರಣ ಮಾಡಿದ್ದಾಳೆ. ಈ ಮೂರು ಹೆಸರುಗಳು ಪ್ರತಿಷ್ಟಿತ ಹೆವಿ ಮೆಟಲ್ ಬ್ಯಾಂಡ್ ಆಗಿವೆ.
ಪತ್ರಕರ್ತ ಹಾಗೂ ನಿರ್ಮಾಪಕ ಡೇವಿಡ್ ಫೆರಿಯರ್ ಈ ಅಚ್ಚರಿಯ ಸ್ಟೋರಿಯೊಂದನ್ನ ಬೆಳಕಿಗೆ ತಂದಿದ್ದಾರೆ. ಮೊದಲು ಈ ಬಗ್ಗೆ ಅನುಮಾನ ಹೊಂದಿದ್ದ ಡೇವಿಡ್ ನ್ಯೂಜಿಲೆಂಡ್ ರಿಜಿಸ್ಟರ್ ಜನರಲ್ನಲ್ಲಿ ಹೆಸರು ಪರಿಶೀಲನೆ ಮಾಡಿದ ವೇಳೆ ಇದು ಸತ್ಯ ಸುದ್ದಿ ಅನ್ನೋದು ಕನ್ಫರ್ಮ್ ಆಗಿದೆ.
ಈ ಬಗ್ಗೆ ಫೆರಿಯರ್ಗೆ ಸ್ಪಷ್ಟನೆ ನೀಡಿರುವ ರಿಜಿಸ್ಟರ್ ಜನರಲ್ ಹಾಗೂ ಜನರಲ್ ಮ್ಯಾನೇಜರ್ ಜೆಫ್ ಮೊಂಟೆಗೋಮೆರಿ ಈ ರೀತಿ ಬ್ಯಾಂಡ್ಗಳ ಹೆಸರನ್ನ ಮಕ್ಕಳಿಗೆ ಇಡೋದ್ರಲ್ಲಿ ಯಾವುದೇ ತಪ್ಪಿಲ್ಲ. ಅದು ಅಪರಾಧವಂತೂ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.
ಫೆರಿಯರ್ ಮೂವರು ಮಕ್ಕಳ ಜನನ ಪ್ರಮಾಣ ಪತ್ರವನ್ನೂ ಪರಿಶೀಲನೆ ಮಾಡಿದ್ದಾರೆ. ಹಾಗೂ ಮೆಟಲಿಕಾ, ಸ್ಲೇಯರ್ ಮತ್ತು ಪಂಟೆರಾರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.