alex Certify ಅಭಿಮಾನಿ ಮನೆಗೆ ದಿಢೀರ್​ ಭೇಟಿ ಕೊಟ್ಟ ಖ್ಯಾತ​ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿ ಮನೆಗೆ ದಿಢೀರ್​ ಭೇಟಿ ಕೊಟ್ಟ ಖ್ಯಾತ​ ಗಾಯಕ

2020ರಲ್ಲಿ ನಡೆದಷ್ಟು ವಿಚಿತ್ರ ಘಟನೆಗಳು ಬಹುಶಃ ಈ ಹಿಂದಿನ ಯಾವುದೇ ವರ್ಷಗಳಲ್ಲಿ ನಡೆದಿರಲಿಕ್ಕಿಲ್ಲ. ಈ ರೀತಿ ಹೇಳ್ತಾ ಇರೋದು ನಾವಲ್ಲ. ಬದಲಾಗಿ ಹಾಲಿವುಡ್​​ ಪಾಪ್​ ಗಾಯಕನ ಅಭಿಮಾನಿ.

ಪಾಪ್​ ಗಾಯಕ ಹ್ಯಾರಿ ಕಾರು ಅವರ ಅಭಿಮಾನಿಯ ಮನೆಯ ಎದುರೇ ಹಾಳಾಗಿ ಹೋಗಿತ್ತು. ಈ ವೇಳೆ ಅಭಿಮಾನಿಯ ತಂದೆಯ ಸ್ನೇಹಿತ ಪಾಪ್​ ಗಾಯಕನಿಗೆ ಒಂದು ಕಪ್​ ಚಹಾ ಕುಡಿಯೋಕೆ ಆಹ್ವಾನಿಸಿದ್ದಾರೆ. ಆದರೆ ಈ ಎಲ್ಲ ಘಟನೆ ನಡೆಯುವಾಗ ಅಭಿಮಾನಿ ರಷೆಲ್​ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಹ್ಯಾರಿ ತನ್ನ ಪ್ರೀತಿಯ ಅಭಿಮಾನಿಗಾಗಿ ಪತ್ರ ಬರೆದು ಅಲ್ಲಿಂದ ತೆರಳಿದ್ದಾರೆ.

ಪತ್ರದಲ್ಲಿ ಹ್ಯಾರಿ, ನಿಮ್ಮ ಮನೆಯ ಎದುರೇ ನನ್ನ ಕಾರು ಹಾಳಾಗಿ ಹೋಗಿತ್ತು. ನಿಮ್ಮ ತಂದೆಯ ಸ್ನೇಹಿತ ನನಗೆ ಒಂದು ಕಪ್​ ಚಹಾ ನೀಡಿ ನಿಮ್ಮ ಮನೆಯಲ್ಲಿರಲು ಅವಕಾಶ ನೀಡಿದ್ರು. ಆದರೆ ನಾವು ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ನಿಮ್ಮನ್ನ ಶೀಘ್ರದಲ್ಲೇ ಭೇಟಿಯಾಗಲು ನಾನು ಕಾತುರನಾಗಿದ್ದೇನೆ ಅಂತಾ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಪತ್ರವನ್ನ ರಷೆಲ್​ ಇನ್ಸ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಈ ಪತ್ರ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಾ ಇದ್ದಂತೆ ಪಾಪ್​ ಗಾಯಕನ ಅಭಿಮಾನಿಗಳು ಈ ಪತ್ರವನ್ನ ತಮ್ಮ ಅಕೌಂಟ್​ಗಳಲ್ಲೂ ಶೇರ್​ ಮಾಡಿದ್ದಾರೆ. ಯಾವುದಕ್ಕೂ ನಿಮ್ಮ ಮನೆಯನ್ನ ಸ್ವಚ್ಚವಾಗಿಟ್ಟುಕೊಳ್ಳಿ, ಯಾಕಂದ್ರೆ ನಿಮ್ಮ ನೆಚ್ಚಿನ ಪಾಪ್​ ಗಾಯಕ ಯಾವಾಗ ಬೇಕಿದ್ರೂ ನಿಮ್ಮ ಮನೆಗೆ ಬಂದು ಒಂದು ಕಪ್​ ಟೀ ಕುಡಿಯಬಹುದು ಅಂತಾ ಬರೆದುಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...