alex Certify ಕಣ್ಸನ್ನೆ ಬೆಡಗಿ ಈಗ ಟಿಕ್ ಟಾಕ್ ನಲ್ಲಿ ಫುಲ್ ಮಿಂಚಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಸನ್ನೆ ಬೆಡಗಿ ಈಗ ಟಿಕ್ ಟಾಕ್ ನಲ್ಲಿ ಫುಲ್ ಮಿಂಚಿಂಗ್

‘ಒರು ಅದಾರ್ ಲವ್’ ಎಂಬ ಮಲಯಾಳಂ ಸಿನೆಮಾದಲ್ಲಿ ಕಣ್ಣು ಹೊಡೆಯುವ ಮೂಲಕ ಕೋಟ್ಯಂತರ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾ ಅಕೌಂಟ್ ನಿಂದ ಔಟ್ ಆಗಿ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದ್ದರು.

ಈಗ ಮತ್ತೆ ಬಂದಿದ್ದಾರೆ, ಆದರೆ, ಇನ್ ಸ್ಟಾದಲ್ಲಲ್ಲ. ಹಾಗಾದರೆ ಎಲ್ಲಿ…? ಹೌದು, ಅವರು ಹೀಗೆ ಇನ್ ಸ್ಟಾ ತೊರೆದಾಗ ಸಾಕಷ್ಟು ಟ್ರೋಲ್ ಗಳಿಗೂ ಒಳಗಾಗಿದ್ದರು. ಕೆಲವು ಅಭಿಮಾನಿಗಳು ತೀವ್ರ ಬೇಸರವನ್ನೂ ಹೊರಹಾಕಿದ್ದರು.

ಇದೀಗ ಮತ್ತೆ ಬಂದಿದ್ದಾರೆ. ಅದೂ ಟಿಕ್ ಟಾಕ್ ಮೂಲಕ. ಟಿಕ್ ಟಾಕ್ ನಲ್ಲಿ ಈಗ ಸಾಕಷ್ಟು ವಿಡಿಯೋಗಳನ್ನು ಒಂದೊಂದಾಗಿಯೇ ಹರಿಬಿಡುತ್ತಿದ್ದು, ಎಲ್ಲವೂ ಫುಲ್ ಹಿಟ್ಸ್. ಈ ಮೂಲಕ ಮತ್ತೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಒಂದು ವಿಡಿಯೋದಲ್ಲಿ ಡಾನ್ಸ್ ಮಾಡಿದ್ದು, ಡಾನ್ಸ್ ನನ್ನ ಸಾಮರ್ಥ್ಯವಲ್ಲದಿದ್ದರೂ, ಹೀಗೊಂದು ಪ್ರಯತ್ನವನ್ನಾದರೂ ಮಾಡೋಣ ಎಂದು ನಿರ್ಧರಿಸಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ 137.8k ಲೈಕ್, 3 ಸಾವಿರಕ್ಕೂ ಹೆಚ್ಚು ಕಮೆಂಟ್, 1200ಕ್ಕೂ ಹೆಚ್ಚು ಶೇರ್ ಗಳನ್ನು ಕಂಡಿದೆ.

ಇನ್ನೊಂದು ವಿಡಿಯೋದಲ್ಲಿ ಅವರ ನೆಚ್ಚಿನ ಹಿರೋಯಿನ್ ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾದ “ಮೀನಮ್ಮ’ ಮಾತನಾಡುವಂತೆ ನಟಿಸಿದ್ದಾರೆ. ಇದೆಲ್ಲವೂ ಈಗ ವೈರಲ್ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...