alex Certify ‘ಎಲ್ಲಾ ಚಿತ್ರಗಳಿಗಿಂತ ವಿಭಿನ್ನ, ವಿಶೇಷವಾಗಿದೆ ‘ಗಂಧದ ಗುಡಿ’: ನಿಜ ಜೀವನದ ಹೀರೋ ನೋಡಲು ತಪ್ಪದೇ ವೀಕ್ಷಿಸಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಎಲ್ಲಾ ಚಿತ್ರಗಳಿಗಿಂತ ವಿಭಿನ್ನ, ವಿಶೇಷವಾಗಿದೆ ‘ಗಂಧದ ಗುಡಿ’: ನಿಜ ಜೀವನದ ಹೀರೋ ನೋಡಲು ತಪ್ಪದೇ ವೀಕ್ಷಿಸಿ’

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಗಂಧದಗುಡಿ’ ನಾಳೆ ತೆರೆ ಕಾಣಲಿದೆ. ಇಂದು ಪ್ರೀಮಿಯರ್ ಶೋ ಆರಂಭವಾಗಿದೆ.

ಇದೇ ಸಂದರ್ಭದಲ್ಲಿ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ನಿಜ ಜೀವನದ ಹೀರೋ ನೋಡಲು ಎಲ್ಲರೂ ತಪ್ಪದೇ ‘ಗಂಧದ ಗುಡಿ’ ವೀಕ್ಷಿಸಿ ಮಕ್ಕಳನ್ನು ಕರೆದುಕೊಂಡು ಬನ್ನಿ. ನಮ್ಮ ಪ್ರೀತಿಯ ಅಪ್ಪು ಸರ್ ನೋಡುತ್ತಾ ಸಂಭ್ರಮಿಸೋಣ ಎಂದು ಹೇಳಿದ್ದಾರೆ.

‘ಕನ್ನಡಿಗರ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಈವರೆಗೆ ನೀವೆಲ್ಲ ಚಲನಚಿತ್ರಗಳಲ್ಲಿ ಹೀರೋ ಆಗಿ ನೋಡಿ ಸಂಭ್ರಮಿಸಿದ್ದೀರಿ’.

ಆದರೆ, ಅಪ್ಪು ಅಭಿನಯದ ಕೊನೆಯ ಚಿತ್ರ ‘ಗಂಧದಗುಡಿ’ ನೋಡಿದಾಗ ನಿಜ ಜೀವನದ ಹೀರೋ ಹೇಗೆ ಇರುತ್ತಾರೆ ಎಂದು ಗೊತ್ತಾಗುತ್ತದೆ. ಎಲ್ಲಾ ಚಲನಚಿತ್ರಗಳಿಗಿಂತ ‘ಗಂಧದಗುಡಿ’ ವಿಭಿನ್ನ ಮತ್ತು ವಿಶೇಷವಾಗಿದೆ.’

ನಿಜ ಜೀವನದ ಹೀರೋ ನೋಡಲು ಎಲ್ಲರೂ ತಪ್ಪದೆ ‘ಗಂಧದಗುಡಿ’ ವೀಕ್ಷಿಸಿ. ಮಕ್ಕಳನ್ನು ಕರೆದುಕೊಂಡು ಬನ್ನಿ, ಕರುನಾಡ ಸೊಬಗಿನ ‘ಗಂಧದಗುಡಿ’ ನವ ಪೀಳಿಗೆಗೆ ಸ್ಪೂರ್ತಿ ನೀಡುತ್ತದೆ ಎಂದು ವಿಜಯ್ ಕಿರಗಂದೂರು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...