alex Certify ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯಳಾಗಿದ್ದಳಾ ರಿಯಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯಳಾಗಿದ್ದಳಾ ರಿಯಾ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿರುವ ರಿಯಾ ಚಕ್ರವರ್ತಿ ವಿರುದ್ಧ ಇದೀಗ ಮಾದಕದ್ರವ್ಯ ಜಾಲದಲ್ಲಿ ಸಕ್ರಿಯವಾಗಿರುವ ಆರೋಪವೂ ಎರಗಿದೆ.

ರಿಯಾ ಚಾಟ್ ಹಿಸ್ಟರಿಯಲ್ಲಿ ಈ ಜಾಲದೊಂದಿಗೆ ನಡೆಸಿರುವ ಸಂದೇಶ ವಿನಿಮಯದ ಮಾಹಿತಿಯು ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ದೊರೆತಿದ್ದು, ಇದನ್ನು ಮಾದಕದ್ರವ್ಯ ನಿಗ್ರಹ ದಳ (ಎನ್ ಸಿ ಬಿ) ಹಸ್ತಾಂತರಿಸಿದೆ. ಇದರ ಆಧಾರದ ಮೇಲೆ ರಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎನ್ ಸಿ ಬಿ ತನಿಖೆ ಕೈಗೊಂಡಿದೆ.

ಇದರ ಬೆನ್ನಲ್ಲೇ ಕರಣ್ ಜೋಹರ್ ಜಾಲತಾಣದ ಖಾತೆಗೆ ಭೇಟಿ ನೀಡುವರ ಸಂಖ್ಯೆ ಹೆಚ್ಚಾಗಿದ್ದು, ಇತ್ತೀಚೆಗೆ ನಡೆದ ಪಾರ್ಟಿಯಲ್ಲಿ ಯಾರೆಲ್ಲ ಇದ್ದರು ಎಂಬ ಹುಡುಕಾಟ ನಡೆದಿದೆ. ಅದರಲ್ಲಿ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ವಿಕಿ ಕೌಶಲ್, ಮಲೈಕಾ ಅರೋರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸುಶಾಂತ್ ಶಂಕಾಸ್ಪದ ಸಾವು, ಮಾದಕದ್ರವ್ಯ ಜಾಲ ಇತ್ಯಾದಿಗಳಿಗೆ ಥಳಕು ಹಾಕಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...