ಟಾಮ್ & ಜೆರ್ರಿ ಅಂದ್ರೆ ಇಷ್ಟ ಇಲ್ಲ ಅನ್ನೋ ವ್ಯಕ್ತಿ ಸಿಗೋದು ತುಂಬಾನೇ ಕಷ್ಟ. ತನ್ನದೇ ಆದ ಶೈಲಿಯಲ್ಲಿ ಕಾರ್ಟೂನ್ ಸರಣಿಗಳ ಪ್ರಸಾರ ಮಾಡುವ ಮೂಲಕ ಟಾಮ್ & ಜೆರ್ರಿ ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಹೆಸರಾಗಿದೆ. ಇದೇ ರೀತಿ ಟಾಮ್ & ಜೆರ್ರಿ ಕಾರ್ಟೂನ್ನ್ನು ತುಂಬಾನೇ ಇಷ್ಟ ಪಡ್ತಿದ್ದ ಫ್ಲೋರಿಡಾದ ಕಲಾವಿದನೊಬ್ಬ ಟಾಮ್ ಆಕೃತಿಯ ರಗ್ನ್ನು ತಯಾರಿಸಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.
ಟಾಮ್ ಮೆಟ್ಟಿಲಿನ ಆಕೃತಿಯಲ್ಲೇ ಮಲಗಿರುವ ದೃಶ್ಯವನ್ನ ಈ ಕಂಬಳಿ ನೆನಪಿಸಿದೆ. ಟಾಮ್ & ಜೆರ್ರಿ ಕಾರ್ಟೂನ್ನಿಂದ ಸ್ಫೂರ್ತಿ ಪಡೆದು ನಾನು ಈ ಕಂಬಳಿಯನ್ನ ನಿರ್ಮಿಸಿದ್ದೇನೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ ಕಲಾವಿದ ನೆಲ್ಲಾಫ್.
ಇನ್ನೊಂದು ಪ್ರತ್ಯೇಕ ಪೋಸ್ಟ್ನಲ್ಲಿ ನೆಲ್ಲಾಫ್ ಇದೇ ಟಾಮ್ ಕಂಬಳಿಯ ಇನ್ನೊಂದು ಫೋಟೋವನ್ನ ಶೇರ್ ಮಾಡಿದ್ದಾರೆ. ನಾನು ಶೀಘ್ರದಲ್ಲೇ ಇನ್ನೂ ಅನೇಕ ಟಾಮ್ ಕಂಬಳಿಯನ್ನ ತಯಾರಿಸಬೇಕು ಎಂದುಕೊಂಡಿದ್ದೇನೆ. ಇದಕ್ಕಾಗಿ ನೀವು ನನ್ನ ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ.
ನೆಲ್ಲಾಫ್ರ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಮೆಂಟ್ ಹಾಗೂ ರಿಟ್ವೀಟ್ ವಿಭಾಗದಲ್ಲಿ ನೆಲ್ಲಾಫ್ರ ಕಾರ್ಯವನ್ನ ಎಲ್ಲರೂ ಹಾಡಿಹೊಗಳಿದ್ದಾರೆ.
ಟಾಮ್ & ಜೆರ್ರಿ ಕಾರ್ಟೂನ್ ಸರಣಿ ಅಮೆರಿಕದ ವಿಲಿಯಂ ಹನ್ನಾ ಹಾಗೂ ಜೋಸೆಫ್ ಬಾರ್ಬೆರಾ 1940ರಲ್ಲಿ ಆರಂಭಿಸಿದ್ದರು. ಈ ಕಾರ್ಟೂನ್ ಬೆಕ್ಕು ಹಾಗೂ ಇಲಿಯ ನಡುವಿನ ವಿಶೇಷ ಬಾಂಧವ್ಯದ ಮೇಲೆ ಆಧರಿಸಿತ್ತು.
https://twitter.com/nellaf/status/1366882104844431365
https://twitter.com/nellaf/status/1366912026702995460
https://twitter.com/jojogurrt/status/1366941895990075392
https://twitter.com/i/status/1367491449009418240