alex Certify ವಿರುಷ್ಕಾ ದಂಪತಿಯ ಮಗುವಿನ ಫೋಟೋ ರಿವೀಲ್​ ವದಂತಿಗೆ ವಿರಾಟ್​ ಸಹೋದರ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರುಷ್ಕಾ ದಂಪತಿಯ ಮಗುವಿನ ಫೋಟೋ ರಿವೀಲ್​ ವದಂತಿಗೆ ವಿರಾಟ್​ ಸಹೋದರ ಸ್ಪಷ್ಟನೆ

ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ದಂಪತಿ ಸೋಮವಾರ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಈ ವಿಚಾರವನ್ನ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಆಪ್ತರು, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಂದ ವಿರುಷ್ಕಾ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಲ್ಲದೇ ಮಗುವಿನ ಫೋಟೋ ಯಾವಾಗ ರಿವೀಲ್​ ಮಾಡ್ತಾರೆ ಅಂತಾಲೂ ಎಲ್ಲರೂ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ.

ಈ ನಡುವೆ ವಿರಾಟ್​ ಕೊಹ್ಲಿಯ ಅಣ್ಣ ವಿಕಾಸ್​ ಕೊಹ್ಲಿ ನವಜಾತ ಶಿಶುವಿನ ಪಾದದ ಫೋಟೋವನ್ನ ಇನ್​ಸ್ಟಾಗ್ರಾಂನದಲ್ಲಿ ಪೋಸ್ಟ್​ ಮಾಡಿ ಮನೆಗೆ ಎಂಜೆಲ್​ ಆಗಮನವಾಗಿದೆ ಎಂದು ಬರೆದುಕೊಳ್ಳುವ ಮೂಲಕ ವಿರುಷ್ಕಾ ದಂಪತಿಗೆ ಶುಭಾಶಯ ಕೋರಿದ್ದರು. ಇದನ್ನ ನೋಡಿದ ನೆಟ್ಟಿಗರು ಇದು ಅನುಷ್ಕಾ ಹಾಗೂ ವಿರಾಟ್​ ದಂಪತಿಯದ್ದೇ ಮಗು ಎಂದು ಭಾವಿಸಿದ್ದಾರೆ. ಈ ಸಂಬಂಧ ಸ್ವತಃ ವಿಕಾಸ್​ ಕೊಹ್ಲಿ ಇನ್ಸ್​ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ದಂಪತಿಗೆ ಶುಭಾಶಯ ಕೋರುವ ಸಲುವಾಗಿ ನಾನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ಫೋಟೋ ವಿರುಷ್ಕಾ ದಂಪತಿಯ ಮಗುವಲ್ಲ. ಆದರೆ ಕೆಲ ಮೀಡಿಯಾ ಚಾನೆಲ್​ಗಳು ಈ ಫೋಟೋಗೆ ಬೇರೆಯ ಅರ್ಥವನ್ನೇ ಕಲ್ಪಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Vikas Kohli (@vk0681)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...