![](https://kannadadunia.com/wp-content/uploads/2021/01/anushka-sharma-and-virat-kohlis-baby-girls-first-glimpse-revealed-by-uncle-vikas-kohli-1-1.jpg)
ಈ ನಡುವೆ ವಿರಾಟ್ ಕೊಹ್ಲಿಯ ಅಣ್ಣ ವಿಕಾಸ್ ಕೊಹ್ಲಿ ನವಜಾತ ಶಿಶುವಿನ ಪಾದದ ಫೋಟೋವನ್ನ ಇನ್ಸ್ಟಾಗ್ರಾಂನದಲ್ಲಿ ಪೋಸ್ಟ್ ಮಾಡಿ ಮನೆಗೆ ಎಂಜೆಲ್ ಆಗಮನವಾಗಿದೆ ಎಂದು ಬರೆದುಕೊಳ್ಳುವ ಮೂಲಕ ವಿರುಷ್ಕಾ ದಂಪತಿಗೆ ಶುಭಾಶಯ ಕೋರಿದ್ದರು. ಇದನ್ನ ನೋಡಿದ ನೆಟ್ಟಿಗರು ಇದು ಅನುಷ್ಕಾ ಹಾಗೂ ವಿರಾಟ್ ದಂಪತಿಯದ್ದೇ ಮಗು ಎಂದು ಭಾವಿಸಿದ್ದಾರೆ. ಈ ಸಂಬಂಧ ಸ್ವತಃ ವಿಕಾಸ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಶುಭಾಶಯ ಕೋರುವ ಸಲುವಾಗಿ ನಾನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಫೋಟೋ ವಿರುಷ್ಕಾ ದಂಪತಿಯ ಮಗುವಲ್ಲ. ಆದರೆ ಕೆಲ ಮೀಡಿಯಾ ಚಾನೆಲ್ಗಳು ಈ ಫೋಟೋಗೆ ಬೇರೆಯ ಅರ್ಥವನ್ನೇ ಕಲ್ಪಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CJ5wWUJDfcs/?utm_source=ig_web_copy_link