alex Certify ‘RRR’ ಬಿಡುಗಡೆಗೆ ಮೊದಲು ಅತಿರೇಕದ ಅಭಿಮಾನಕ್ಕೆ ಬ್ರೇಕ್, ಸಿನಿಮಾ ಸ್ಕ್ರೀನ್ ಎದುರು ಮುಳ್ಳುತಂತಿ ಬೇಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘RRR’ ಬಿಡುಗಡೆಗೆ ಮೊದಲು ಅತಿರೇಕದ ಅಭಿಮಾನಕ್ಕೆ ಬ್ರೇಕ್, ಸಿನಿಮಾ ಸ್ಕ್ರೀನ್ ಎದುರು ಮುಳ್ಳುತಂತಿ ಬೇಲಿ

ನೆಚ್ಚಿನ ನಟರ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಪರದೆಯ ಬಳಿ ಹೋಗಿ ಅಭಿಮಾನಿಗಳು ಡ್ಯಾನ್ಸ್ ಮಾಡುತ್ತಾರೆ. ಕೆಲವೊಮ್ಮೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ಸ್ಕ್ರೀನ್ ಬಳಿಯೇ ಸಂಭ್ರಮಿಸುತ್ತಾರೆ. ಇದರಿಂದ ಕೆಲವೊಮ್ಮೆ ಸಿನಿಮಾ ನೋಡುವವರಿಗೆ ಕಿರಿಕಿರಿಯಾಗುತ್ತದೆ.

ಇದಕ್ಕೆ ಬ್ರೇಕ್ ಹಾಕಲು ಚಿತ್ರಮಂದಿರದ ಮಾಲೀಕರು ಮುಳ್ಳು ತಂತಿ ಬೇಲಿಯನ್ನೇ ಹಾಕಿದ್ದಾರೆ. ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿರುವ ಚಿತ್ರಮಂದಿರದಲ್ಲಿ ‘RRR’ ಚಲನಚಿತ್ರದ ಪ್ರದರ್ಶನಕ್ಕೆ ಮೊದಲು ವೀಕ್ಷಕರು ಪರದೆಯ ಹತ್ತಿರ ಬರದಂತೆ ಮುಳ್ಳುತಂತಿಗಳ ಬೇಲಿ ಹಾಕಲಾಗಿದೆ.

ಒಂದೇ ಚಿತ್ರದಲ್ಲಿ ಇಬ್ಬರು ಟಾಪ್ ಸ್ಟಾರ್‌ ಗಳು ನಟಿಸಿರುವ ‘ಆರ್.ಆರ್.ಆರ್.’ ಬಿಡುಗಡೆ ಸಂದರ್ಭದಲ್ಲಿ ಇಡೀ ಥಿಯೇಟರ್ ತುಂಬಿ ಪರದೆ ಬಳಿ ಅಭಿಮಾನಿಗಳು ಧಾವಿಸುವುದರಿಂದ ಸಿನಿಮಾ ವೀಕ್ಷಿಸಲು ಪ್ರೇಕ್ಷಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪರದೆ ಹತ್ತಿರಕ್ಕೆ ಬರದಂತೆ ಮುಳ್ಳು ತಂತಿ ಬೇಲಿ ಹಾಕಲಾಗಿದೆ ಎಂದು ಥಿಯೇಟರ್ ಉಸ್ತುವಾರಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...