alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ: 23 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು ಒಂದೇ ಚಿತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: 23 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು ಒಂದೇ ಚಿತ್ರ…!

25 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರವೊಂದು ನಿರಂತರ ಪ್ರದರ್ಶನ ಕಂಡಿತ್ತು ಎಂದರೆ ನೀವು ನಂಬಲೇಬೇಕು. ಹೌದು, ಇಂಥದೊಂದು ಹೆಗ್ಗಳಿಕೆಗೆ ಶಾರುಕ್-ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಚಿತ್ರ ಪಾತ್ರವಾಗಿತ್ತು.

1995 ರಲ್ಲಿ ಯಶ್ ಚೋಪ್ರಾ ಬ್ಯಾನರ್ ನಲ್ಲಿ ನಿರ್ಮಾಣಗೊಂಡ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದರು. ಬಿಡುಗಡೆ ಬಳಿಕ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡಿದ್ದ ಈ ಚಿತ್ರ, ಮುಂಬೈನ ‘ಮರಾಠಾ ಮಂದಿರ್’ ಚಿತ್ರಮಂದಿರದಲ್ಲಿ ನಿರಂತರ ಪ್ರದರ್ಶನ ಕಂಡಿತ್ತು.

ಅಚ್ಚರಿಯ ಸಂಗತಿಯೆಂದರೆ ಬೆಳಿಗ್ಗೆ 11.30 ರ ಪ್ರದರ್ಶನ ಬಹಳಷ್ಟು ಬಾರಿ ಹೌಸ್ ಫುಲ್ ಆಗಿತ್ತು.‌ ಕೊರೊನಾ ಕಾರಣಕ್ಕೆ ಲಾಕ್ಡೌನ್‌ ಆಗಿದ್ದರಿಂದ ಚಿತ್ರ ಪ್ರದರ್ಶನ ರದ್ದುಗೊಂಡಿತ್ತು. ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’‌ ಚಿತ್ರ ಬಿಡುಗಡೆಗೊಂಡು ನಾಳೆಗೆ 25ವರ್ಷಗಳಾಗುತ್ತಿದ್ದು, ಚಿತ್ರತಂಡ ಸಂತಸಗೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...