
25 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರವೊಂದು ನಿರಂತರ ಪ್ರದರ್ಶನ ಕಂಡಿತ್ತು ಎಂದರೆ ನೀವು ನಂಬಲೇಬೇಕು. ಹೌದು, ಇಂಥದೊಂದು ಹೆಗ್ಗಳಿಕೆಗೆ ಶಾರುಕ್-ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಚಿತ್ರ ಪಾತ್ರವಾಗಿತ್ತು.
1995 ರಲ್ಲಿ ಯಶ್ ಚೋಪ್ರಾ ಬ್ಯಾನರ್ ನಲ್ಲಿ ನಿರ್ಮಾಣಗೊಂಡ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದರು. ಬಿಡುಗಡೆ ಬಳಿಕ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡಿದ್ದ ಈ ಚಿತ್ರ, ಮುಂಬೈನ ‘ಮರಾಠಾ ಮಂದಿರ್’ ಚಿತ್ರಮಂದಿರದಲ್ಲಿ ನಿರಂತರ ಪ್ರದರ್ಶನ ಕಂಡಿತ್ತು.
ಅಚ್ಚರಿಯ ಸಂಗತಿಯೆಂದರೆ ಬೆಳಿಗ್ಗೆ 11.30 ರ ಪ್ರದರ್ಶನ ಬಹಳಷ್ಟು ಬಾರಿ ಹೌಸ್ ಫುಲ್ ಆಗಿತ್ತು. ಕೊರೊನಾ ಕಾರಣಕ್ಕೆ ಲಾಕ್ಡೌನ್ ಆಗಿದ್ದರಿಂದ ಚಿತ್ರ ಪ್ರದರ್ಶನ ರದ್ದುಗೊಂಡಿತ್ತು. ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಚಿತ್ರ ಬಿಡುಗಡೆಗೊಂಡು ನಾಳೆಗೆ 25ವರ್ಷಗಳಾಗುತ್ತಿದ್ದು, ಚಿತ್ರತಂಡ ಸಂತಸಗೊಂಡಿದೆ.