alex Certify ಮಾಜಿ ಐಎಎಸ್ ಅಧಿಕಾರಿಯ ಮ್ಯೂಸಿಕ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಐಎಎಸ್ ಅಧಿಕಾರಿಯ ಮ್ಯೂಸಿಕ್ ವಿಡಿಯೋ ವೈರಲ್

ಭಾರತೀಯ ಆಡಳಿತ ಸೇವೆ ಹುದ್ದೆಗೆ ರಾಜೀನಾಮೆ ನೀಡಿ ನಟನೆಯ ವೃತ್ತಿ ಹಿಡಿದಿರುವ ಅಭಿಷೇಕ್ ಸಿಂಗ್‌ರ ಜನಪ್ರಿಯ ವಿಡಿಯೋ ’ದಿಲ್ ತೋಡ್‌ಕೆ’ ಇದೀಗ ವೈರಲ್ ಆಗಿದೆ.

ಪಂಜಾಬಿ ಗಾಯಕ ಬಿ ಪ್ರಾಕ್‌ ಈ ಹಾಡುಗಳಿಗೆ ದನಿ ನೀಡಿದ್ದು, ರೋಚಕ್ ಕೊಹ್ಲಿ ಸಂಗೀತ ಹಾಗೂ ಮನೋಜ್ ಮುಂಟಾಶಿರ್‌ ಎಂಬುವವರಿಂದ ಸಾಹಿತ್ಯ ಬರೆಸಲಾಗಿದೆ. ತಾವು ಐಎಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ವೇಳೆ ಆದಂಥ ಅನುಭವಗಳನ್ನು ಈ ಮ್ಯೂಸಿಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರಂತೆ ಅಭಿಷೇಕ್.

ಈ ಅಭಿಷೇಕ್ ಸಿಂಗ್ ಯಾರು ಗೊತ್ತೇ? 2010 ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ದುರ್ಗಾ ಶಕ್ತಿ ನಾಗ್‌ಪಾಲ್ ಅವರ ಪತಿ. ಉತ್ತರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಮರಳು ಮಾಫಿಯಾ ವಿರುದ್ಧ ಸಮರ ಸಾರಿದ್ದ ದುರ್ಗಾ ಶಕ್ತಿ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...