
ಪಂಜಾಬಿ ಗಾಯಕ ಬಿ ಪ್ರಾಕ್ ಈ ಹಾಡುಗಳಿಗೆ ದನಿ ನೀಡಿದ್ದು, ರೋಚಕ್ ಕೊಹ್ಲಿ ಸಂಗೀತ ಹಾಗೂ ಮನೋಜ್ ಮುಂಟಾಶಿರ್ ಎಂಬುವವರಿಂದ ಸಾಹಿತ್ಯ ಬರೆಸಲಾಗಿದೆ. ತಾವು ಐಎಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ವೇಳೆ ಆದಂಥ ಅನುಭವಗಳನ್ನು ಈ ಮ್ಯೂಸಿಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರಂತೆ ಅಭಿಷೇಕ್.
ಈ ಅಭಿಷೇಕ್ ಸಿಂಗ್ ಯಾರು ಗೊತ್ತೇ? 2010 ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ದುರ್ಗಾ ಶಕ್ತಿ ನಾಗ್‌ಪಾಲ್ ಅವರ ಪತಿ. ಉತ್ತರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಮರಳು ಮಾಫಿಯಾ ವಿರುದ್ಧ ಸಮರ ಸಾರಿದ್ದ ದುರ್ಗಾ ಶಕ್ತಿ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ್ದರು.