
ಇನ್ನೂ ಹೆಸರಿಡದ ಸಿನಿಮಾದಲ್ಲಿ ದುಲ್ಕರ್ ಲೆಫ್ಟಿನಂಟ್ ರಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ದುಲ್ಕರ್ ಸಲ್ಮಾನ್ ನಟನೆಯ ಎರಡನೆ ಸಿನಿಮಾ ಆಗಿದೆ. ಫಸ್ಟ್ ಲುಕ್ ಪೋಸ್ಟರ್ ಜೊತೆಯಲ್ಲಿ ಚಿತ್ರತಂಡ ಶೂಟಿಂಗ್ ಸೆಟ್ನಲ್ಲಿ ದುಲ್ಕರ್ರ ವಿಡಿಯೋವನ್ನ ಶೇರ್ ಮಾಡಿದ್ದಾರೆ.
ಈ ಸಿನಿಮಾ ಮೂಲಕ ದುಲ್ಕರ್ ಸಲ್ಮಾನ್ ಹಾಗೂ ನಿರ್ದೇಶಕ ಹನಿ ರಾಘವಪುಡಿ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಫಸ್ಟ್ ಲುಕ್ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ದುಲ್ಕರ್ ಇದು ತಮಗೆ ಸಿಕ್ಕ ಬೆಸ್ಟ್ ಬರ್ತಡೇ ಗಿಫ್ಟ್ ಎಂದು ಹೇಳಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.