alex Certify BIG NEWS: ಡ್ರಗ್ಸ್ ಪ್ರಕರಣ; ಜೈಲು ಹಕ್ಕಿಯಾಗಿದ್ದ ನಟಿ ಸಂಜನಾಗೆ ಬಿಗ್ ರಿಲೀಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರಗ್ಸ್ ಪ್ರಕರಣ; ಜೈಲು ಹಕ್ಕಿಯಾಗಿದ್ದ ನಟಿ ಸಂಜನಾಗೆ ಬಿಗ್ ರಿಲೀಫ್

ಬೆಂಗಳೂರು: ಡ್ರಗ್ಸ್ ಜಾಲದ ಜೊತೆ ನಂಟು ಆರೋಪ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಸಂಜನಾ ಅವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಇಲ್ಲವಾದಲ್ಲಿ ಬ್ರೇನ್ ಹ್ಯಾಮರೇಜ್ ಆಗುವ ಸಾಧ್ಯತೆಯಿದೆ ಹೀಗಾಗಿ ತಕ್ಷಣ ಜಾಮೀನು ನೀಡುವಂತೆ ಸಂಜನಾ ಪರ ವಕೀಲರು ಹೈಕೋರ್ಟ್ ಗೆ ವೈದ್ಯರ ಸರ್ಟಿಫಿಕೇಟ್ ಜೊತೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾ.ಶ್ರೀನಿವಾಸ್ ಹರೀಶ್ ಅವರು ಸಂಜನಾಗೆ ಜಾಮೀನು ಮಂಜೂರು ಮಾಡಿದ್ದಾರೆ.

ಸಂಜನಾ ಅವರು 3 ಲಕ್ಷ ರೂ ಗಳ ವೈಯಕ್ತಿಕ ಬಾಂಡ್ ನೊಂದಿಗೆ ಇಬ್ಬರ ಶ್ಯೂರಿಟಿ ಒದಗಿಸಬೇಕು ಹಾಗೂ ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...