alex Certify ಶಾರುಖ್ ಪುತ್ರನಿಗೆ 13 ಷರತ್ತು: ಅಡ್ವಾನ್ಸ್ ಬರ್ತಡೇ ಗಿಫ್ಟ್ ಸಿಕ್ಕ ಆರ್ಯನ್ ಗೆ ಹೈಕೋರ್ಟ್ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್ ಪುತ್ರನಿಗೆ 13 ಷರತ್ತು: ಅಡ್ವಾನ್ಸ್ ಬರ್ತಡೇ ಗಿಫ್ಟ್ ಸಿಕ್ಕ ಆರ್ಯನ್ ಗೆ ಹೈಕೋರ್ಟ್ ಮಹತ್ವದ ಸೂಚನೆ

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮೂವರಿಗೆ ಜಾಮೀನು ನೀಡಲಾಗಿದೆ. ಆರ್ಯನ್ ಖಾನ್ ಗೆ ಬರ್ತಡೇಗೆ ಅಡ್ವಾನ್ಸ್ ಗಿಫ್ಟ್ ಸಿಕ್ಕಿದೆ. ನವೆಂಬರ್ 2 ರಂದು ಆರ್ಯನ್ ಹುಟ್ಟುಹಬ್ಬವಿದ್ದು, ಜೈಲಿಂದ ಬಿಡುಗಡೆಯ ಮೂಲಕ ಗಿಫ್ಟ್ ಸಿಕ್ಕಂತಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಎನ್.ಸಿ.ಬಿ. ಆರ್ಯನ್ ನನ್ನು ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದು, ಬಳಿಕ ನ್ಯಾಯಾಂಗ ಬಂಧನದಲ್ಲಿದ್ದರು. 23 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ವಜಾಗೊಳಿಸಿತ್ತು.

ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದು, ಆರ್ಯನ್ ಪ್ರತಿ ಶುಕ್ರವಾರ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಬೇಕು.

ನ್ಯಾಯಾಲಯದ ವಶಕ್ಕೆ ಪಾಸ್ಪೋರ್ಟ್ ನೀಡಬೇಕು. ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳಬಾರದು, ಉಳಿದ ಆರೋಪಿಗಳ ಸಂಪರ್ಕದಲ್ಲಿ ಇರಬಾರದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡಬಾರದು, ಸಾಕ್ಷಿಗಳ ನಾಶಕ್ಕೆ ಯತ್ನಿಸಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬುದು ಸೇರಿದಂತೆ ಒಟ್ಟು 13 ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ನಾಳೆ ಇಲ್ಲವೇ ನಾಡಿದ್ದು, ಆರ್ಯನ್ ಖಾನ್ ಜೈಲಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವಕೀಲರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...