![](https://kannadadunia.com/wp-content/uploads/2021/01/freepressjournal_2021-01_c4067cac-8263-440f-a1e8-70bc16e18bb2_EsGoHO1UYAIX_x_.jpg)
ಡೋರೆಮಾನ್ ಬೆಸ್ಟ್ ಫ್ರೆಂಡ್ ನೋಬಿತಾ ಹಾಗೂ ಶಿಝುಕಾ ಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಕೆಯನ್ನ ತನ್ನತ್ತ ಸೆಳೆಯೋಕೆ ಶಿಝುಕಾ ಮಾಡೋ ಪ್ಲಾನ್ಗಳು ಒಂದೆರಡಲ್ಲ.
ಈತನ ಪ್ರೇಮದ ಕತೆಗೆ ಆತನ ನಾಟಿ ಗೆಳೆಯರಾದ ಗ್ಯಾನ್ ಹಾಗೂ ಸುನಿಯೋ ಕೋಡ ಕಾಟಗಳನ್ನ ನೋಡೋದೇ ಒಂದು ಮಜಾ.
ಮಕ್ಕಳ ಫೇವರಿಟ್ ಕಾರ್ಟೂನ್ ಶೋ ಪಾತ್ರಗಳಾದ ನೋಬಿಟಾ ಹಾಗೂ ಶಿಝುಕಾ ಇದೀಗ ಮದುವೆಯಾಗೋಕೆ ರೆಡಿಯಾಗಿದ್ದಾರೆ. ಸ್ಟ್ಯಾಂಡ್ ಬೈ ಮಿ ಡೊರೆಮಾನ್ 2ನಲ್ಲಿ ಈ ಜೋಡಿ ಮದುವೆಯಾಗಲಿದೆ. ಈ ಸುದ್ದಿಯನ್ನ ನೋಡಿದ ಟ್ವೀಟಿಗರು ಫುಲ್ ಖುಶ್ ಆಗಿಬಿಟ್ಟಿದ್ದಾರೆ.
ಕೊನೆಗೂ ಈ ಅದ್ಭುತ ಗಳಿಗೆಗೆ ನಾವು ಸಾಕ್ಷಿಯಾಗ್ತಿದ್ದೇವೆ ಅಂತಾ ಟ್ವೀಟಿಗರು ಈ ವಿಚಾರವನ್ನ ಸಿಕ್ಕಾಪಟ್ಟೆ ವೈರಲ್ ಮಾಡಿದ್ದಾರೆ. ಒಬ್ಬೊಬ್ಬರ ಟ್ವೀಟಿಗಳನ್ನ ನೋಡ್ತಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರೋದ್ರಲ್ಲಿ ಸಂದೇಹವಿಲ್ಲ.