alex Certify ಮೊಹಮ್ಮದ್​ ರಫಿ ಹಾಡಿಗೆ ದನಿಯಾದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಹಮ್ಮದ್​ ರಫಿ ಹಾಡಿಗೆ ದನಿಯಾದ ವೈದ್ಯರು

ಕೊರೊನಾ ವೈರಸ್​ ವಿರುದ್ಧ ವೈದ್ಯಲೋಕದ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಕಳೆದೊಂದು ವರ್ಷದಿಂದ ಅವಿರತ ಹೋರಾಟ ನಡೆಸುತ್ತಲೇ ಇದ್ದಾರೆ. ರೋಗಿಗಳ ಜೀವ ಉಳಿಸುವ ಸಲುವಾಗಿ ಎಷ್ಟೋ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ.

ಆದರೆ ಈ ಎಲ್ಲಾ ಸಂಕಷ್ಟಗಳ ನಡುವೆಯೂ ಕೆಲ ವೈದ್ಯರು ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವ ಕೆಲ ವಿಡಿಯೋಗಳನ್ನ ಹಂಚಿಕೊಳ್ತಾ ಇರ್ತಾರೆ.

ಚಂಡೀಗಢದ ಇಬ್ಬರು ವೈದ್ಯರು ಸೋಶಿಯಲ್ ಮೀಡಿಯಾದಲ್ಲಿ ಜೋಡಿಯಾಗಿ ಹಾಡೊಂದನ್ನ ಹಾಡಿದ್ದಾರೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ಈ ವಿಡಿಯೋ 8000ಕ್ಕೂ ಅಧಿಕ ವೀವ್ಸ್ ಹಾಗೂ ಕಮೆಂಟ್​ಗಳನ್ನ ಸಂಪಾದಿಸಿದೆ. ಡಾ. ರಮನ್​ ಅಬ್ರೋಲ್​ ಹಾಗೂ ಡಾ. ಬೀಮಾನ್​ ಸಾಯ್ಕಿಯಾ ಈ ಹಾಡನ್ನ ಹಾಡಿದ ವೈದ್ಯರಾಗಿದ್ದಾರೆ.

ʼಆಜಾ ಪಂಚಿ ಅಕೇಲಾ ಹೈʼ ಎಂಬ ಹಾಡಿಗೆ ಈ ಇಬ್ಬರೂ ವೈದ್ಯರು ದನಿಯಾಗಿದ್ದಾರೆ. ನೌ ದೋ ಗ್ಯಾರಾ ಸಿನಿಮಾದ ಈ ಹಾಡನ್ನ ಮೊಹಮ್ಮದ್​ ರಫಿ ಹಾಗೂ ಆಶಾ ಬೋಸ್ಲಾ ಹಾಡಿದ್ದಾರೆ. ಈ ಸಿನಿಮಾದಲ್ಲಿ ದೇವ್​ ಆನಂದ್​ ಹಾಗೂ ಕಲ್ಪನಾ ಕಾರ್ತಿಕ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

— Kaveri ?? (@ikaveri) May 28, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...