alex Certify ಕುತೂಹಲಕ್ಕೆ ಕಾರಣವಾಗಿದೆ ಅಕ್ಷಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಅಕ್ಷಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್

ದೀಪಾವಳಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಶುಭಸುದ್ದಿಯೊಂದನ್ನ ನೀಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಹೆಸರನ್ನ ಘೋಷಣೆ ಮಾಡಿದ್ದಾರೆ ಬಾಲಿವುಡ್​ ಕಿಲಾಡಿ. ಸಿನಿಮಾ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಚಿತ್ರ ರಾಮ್​ ಸೇತು ಅಂತಾ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಚಿತ್ರದ ಪೋಸ್ಟರ್​ ರಿಲೀಸ್​ ಮಾಡಿರುವ ನಟ ಅಕ್ಷಯ್​ ಕುಮಾರ್​, ಈ ದೀಪಾವಳಿ ಹಬ್ಬದಂದು ರಾಮನ ಆದರ್ಶಗಳನ್ನ ಜೀವಂತವಾಗಿಡಲು ಪ್ರಯತ್ನಿಸೋಣ. ಮುಂದಿನ ಪೀಳಿಗೆಗೆ ಸಂಪರ್ಕ ಸೇತುವೆ ನಿರ್ಮಿಸೋಣ. ಈ ಮಹತ್ತರವಾದ ಕಾರ್ಯ ಮಾಡಲು ರಾಮ್​ಸೇತು ಎಂಬ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ರಾಮ್​ ಸೇತು ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​​ ಹಿಂದೆ ರಾಮನ ಚಿತ್ರವಿದೆ. ಕುತ್ತಿಗೆಗೆ ಕೇಸರಿ ಬಣ್ಣದ ಶಾಲನ್ನ ಹಾಕಿರುವ ಅಕ್ಷಯ್​ ಕುಮಾರ್​​ ಸಮುದ್ರದ ಹಾದಿಯಲ್ಲಿ ನಡೆದುಕೊಂಡು ಬರ್ತಿದ್ದಾರೆ .

— Akshay Kumar (@akshaykumar) November 14, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...