
ಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಹೆಸರನ್ನ ಘೋಷಣೆ ಮಾಡಿದ್ದಾರೆ ಬಾಲಿವುಡ್ ಕಿಲಾಡಿ. ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಚಿತ್ರ ರಾಮ್ ಸೇತು ಅಂತಾ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ನಟ ಅಕ್ಷಯ್ ಕುಮಾರ್, ಈ ದೀಪಾವಳಿ ಹಬ್ಬದಂದು ರಾಮನ ಆದರ್ಶಗಳನ್ನ ಜೀವಂತವಾಗಿಡಲು ಪ್ರಯತ್ನಿಸೋಣ. ಮುಂದಿನ ಪೀಳಿಗೆಗೆ ಸಂಪರ್ಕ ಸೇತುವೆ ನಿರ್ಮಿಸೋಣ. ಈ ಮಹತ್ತರವಾದ ಕಾರ್ಯ ಮಾಡಲು ರಾಮ್ಸೇತು ಎಂಬ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ರಾಮ್ ಸೇತು ಪೋಸ್ಟರ್ನಲ್ಲಿ ಅಕ್ಷಯ್ ಕುಮಾರ್ ಹಿಂದೆ ರಾಮನ ಚಿತ್ರವಿದೆ. ಕುತ್ತಿಗೆಗೆ ಕೇಸರಿ ಬಣ್ಣದ ಶಾಲನ್ನ ಹಾಕಿರುವ ಅಕ್ಷಯ್ ಕುಮಾರ್ ಸಮುದ್ರದ ಹಾದಿಯಲ್ಲಿ ನಡೆದುಕೊಂಡು ಬರ್ತಿದ್ದಾರೆ .