alex Certify ಐಶ್ವರ್ಯಾ ರೈ – ಜಯಾ ಬಚ್ಚನ್​​​ ಕುರಿತಾದ ಇಂಟರೆಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ಅಭಿಷೇಕ್​ ಬಚ್ಚನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಶ್ವರ್ಯಾ ರೈ – ಜಯಾ ಬಚ್ಚನ್​​​ ಕುರಿತಾದ ಇಂಟರೆಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ಅಭಿಷೇಕ್​ ಬಚ್ಚನ್​

ಬಾಲಿವುಡ್​ ಬ್ಯೂಟಿ ಕ್ವೀನ್​ ಐಶ್ವರ್ಯಾ ರೈ ಬಚ್ಚನ್​ ಹಾಗೂ ಜಯಾ ಬಚ್ಛನ್​ ಫೇಮಸ್​ ಅತ್ತೆ – ಸೊಸೆಯಂದಿರು ಅಂದರೆ ತಪ್ಪಾಗಲಿಕ್ಕಿಲ್ಲ. ಸೋಶಿಯಲ್​ ಮೀಡಿಯಾಗಳಲ್ಲಿ ಮಾತ್ರವಲ್ಲದೇ ಮನೆಯಲ್ಲಿಯೂ ಸಹ ಐಶ್ವರ್ಯಾ ಹಾಗೂ ಜಯಾ ಬಚ್ಛನ್​ ಸಖತ್​ ಫ್ರೆಂಡ್ಲಿಯಾಗಿ ಇರ್ತಾರಂತೆ..! ಎಷ್ಟೋ ಬಾರಿ ಅಭಿಷೇಕ್​ ಬಚ್ಚನ್​ ವಿರುದ್ಧವೇ ಅತ್ತೆ ಸೊಸೆ ಜೋಡಿಯಾಗಿ ಸೆಣಸಾಡ್ತಾರಂತೆ.

ಯಾವಾಗೆಲ್ಲ ಅಭಿಷೇಕ್​ ಬಚ್ಚನ್​ಗೆ ಗೊತ್ತಾಗದ ಹಾಗೆ ಮಾತಾನಾಡಬೇಕೆಂದೆನಿಸುತ್ತೋ ಆಗೆಲ್ಲ ಜಯಾ ಬಚ್ಚನ್​ ಹಾಗೂ ಐಶ್ವರ್ಯಾ ರೈ ಬಚ್ಚನ್​​ ಇಬ್ಬರೂ ಬಂಗಾಳಿ ಭಾಷೆಯಲ್ಲಿ ಮಾತನಾಡಿಕೊಳ್ತಾರಂತೆ.

ಹಳೆಯ ಸಂದರ್ಶನವೊಂದರಲ್ಲಿ ಅಭಿಷೇಕ್​ ಬಚ್ಛನ್​​ ಈ ವಿಚಾರವನ್ನ ಶೇರ್​ ಮಾಡಿದ್ದಾರೆ. ನನ್ನ ವಿರುದ್ಧ ಮಾತನಾಡುವಾಗೆಲ್ಲ ನನ್ನ ಪತ್ನಿ ಹಾಗೂ ಅಮ್ಮ ಬಂಗಾಳಿ ಭಾಷೆಯಲ್ಲಿ ಮಾತನಾಡಿಕೊಳ್ತಾರೆ. ಜಯಾ ಬಚ್ಛನ್​ ಬಂಗಾಳಿ ಭಾಷೆಯನ್ನ ನಿರರ್ಗಳವಾಗಿ ಮಾತನಾಡ್ತಾರೆ. ಐಶ್ವರ್ಯಾ ರೈ ಚೋಕರ್​ ಬಾಲಿ ಸಿನಿಮಾಶೂಟಿಂಗ್​ ವೇಳೆ ಬಂಗಾಲಿ ಭಾಷೆಯನ್ನ ಕಲಿತಿದ್ದಾರೆ.

ಅಭಿಷೇಕ್​ ಬಚ್ಚನ್​ ಶೀಘ್ರದಲ್ಲೇ ಬಾಬ್​ ಬಿಸ್ವಾಸ್​ ಸಿನಿಮಾ ಮೂಲಕ ಜನರ ಮುಂದೆ ಬರಲಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್​ ಬಚ್ಚನ್​ ಜೊತೆ ಚಿತ್ರಾಂಗದಾ ಸಿಂಗ್​ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...