ದೆಹಲಿ: ತಮ್ಮ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಉದ್ಘಾಟನೆಯಾಗಲಿರುವ ಧನ್ಸಾ ಮೆಟ್ರೋ ನಿಲ್ದಾಣವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಈ ಪ್ರದೇಶದ ಶ್ರೀಮಂತ ಸಂಸ್ಕೃತಿ, ಕಲೆ ಹಾಗೂ ಸಸ್ಯವರ್ಗವನ್ನು ಚಿತ್ರಿಸಿ ಅಲಂಕರಿಸಲಾಗಿದೆ.
ನೈಋತ್ಯ ದೆಹಲಿಯ ನಜಫ್ ಗರ್-ಧನ್ಸಾ ಪ್ರದೇಶದಲ್ಲಿ ಬಹಳ ಆಳವಾಗಿರುವ ಸಾಂಸ್ಕೃತಿಕ ಬೇರುಗಳನ್ನು ಹೊಂದಿದೆ ಎಂದು ಡಿಎಂಆರ್ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಈ ಪ್ರದೇಶವು ಐತಿಹಾಸಿಕ ವಿಷಯಗಳಿಂದ ಸಮೃದ್ಧವಾಗಿದೆ. ವಲಸೆ ಹಕ್ಕಿಗಳ ಭೇಟಿ ಹಾಗೂ ಸ್ಥಳೀಯ ವನ್ಯಜೀವಿಗಳ ಪ್ರವರ್ಧಮಾನಕ್ಕೆ ಉತ್ತೇಜನ ನೀಡುವ ಸಲುವಾಗಿ ಕಲಾಕೃತಿಗಳನ್ನು ಚಿತ್ರಿಸಲಾಗಿದೆ ಎಂದು ತಿಳಿಸಿದೆ.
ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ
‘’ನಜಫ್ ಗರ್ ಹಾಗೂ ಧನ್ಸಾ ನಡುವೆ ಇರುವ ಸರೋವರವು ಶ್ರೀಮಂತ ಮತ್ತು ವಿಶಿಷ್ಟವಾದ ಜೀವ ವೈವಿದ್ಯತೆಯನ್ನು ಹೊಂದಿದೆ. ಹದ್ದುಗಳು, ಬಾತುಕೋಳಿಗಳು, ಕಿಂಗ್ ಫಿಶರ್ ಗಳು ಹಾಗೂ ಗಿಳಿಗಳಂತಹ ಪಕ್ಷಿಗಳಿಗೆ ನೆಲೆಯಾಗಿದೆ. ಹೀಗಾಗಿ ಪಕ್ಷಿ ವೀಕ್ಷಕರು ಹಾಗೂ ಸ್ಥಳೀಯ ವನ್ಯಜೀವಿ ಪ್ರಿಯರಿಗೆ ಇದು ನೆಚ್ಚಿನ ತಾಣವಾಗಲಿದೆ. ನಿಲ್ದಾಣದಲ್ಲಿನ ಮುದ್ರಿತ ಗಾಜಿನ ಫಲಕಗಳು ಈ ಪ್ರದೇಶದಲ್ಲಿನ ವಿವಿಧ ಪಕ್ಷಿ ಪ್ರಭೇದಗಳು, ವಲಸೆ ಹಕ್ಕಿಗಳು ಮುಂತಾದವನ್ನು ಗುರುತಿಸಲು ಸಹಕಾರಿಯಾಗುತ್ತದೆ’’ ಎಂದು ಡಿಎಂಆರ್ಸಿ ಮಾಹಿತಿ ನೀಡಿದೆ.
‘’ಸ್ಥಳೀಯ ಹಳ್ಳಿಗಳಿಗೆ ಸಂಬಂಧಿಸಿದ ಪ್ರಾಚೀನ ಜನಪದವನ್ನು ಚಿತ್ರಿಸುವ ವ್ಯಾಪಕ ಕಲಾಕೃತಿಗಳೂ ಸಹ ಇವೆ. ಸುಂದರವಾಗಿ ರಚಿಸಲಾದ ಎಲ್ಲ ಕಲೆಗಳನ್ನು ವಿವಿಧ ಯುವ ಹಾಗೂ ಸ್ಥಳೀಯ ಕಲಾವಿದರು ಮತ್ತು ಛಾಯಾಗ್ರಾಹಕರು ಕೊಡುಗೆ ನೀಡಿದ್ದಾರೆ’’ ಎಂದು ಡಿಎಂಆರ್ಸಿ ಹೇಳಿದೆ.
ದ್ವಾರಕಾ-ಧನ್ಸಾ ಗ್ರೇ ಲೈನ್ ಮೆಟ್ರೋ ಕಾರಿಡಾರ್ ನ ಒಂದು ಭಾಗವಾಗಿರುವ ಈ ನಿಲ್ದಾಣವು ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರೆಯಲಾಗುವುದು. ಇದು ಒಂದು ಕಿ.ಮೀ ಉದ್ದದ ಮಾರ್ಗ ಇದಾಗಿದೆ. ದೆಹಲಿ ಮೆಟ್ರೋ ರೈಲು ಜಾಲವು 390 ಕಿ.ಮೀ ಉದ್ದವಾಗಲಿದ್ದು, 286 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.