ಫಿಲಂ ಮೇಕರ್ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುವ ವೇಳೆ ನಟಿ ರಿಚಾ ಚಡ್ಡಾ ಹೆಸರು ಬಳಸಿಕೊಂಡಿದ್ದರಿಂದ ಗರಂ ಆಗಿದ್ದ ನಟಿ ಮಾನನಷ್ಟ ಮೊಕದ್ದಮೆ ಹೂಡಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಪ್ರಕರಣ ಸಂಬಂಧ ರಿಚಾ ಚಡ್ಡಾ ಬಳಿ ನಟಿ ಪಾಯಲ್ ಘೋಷ್ ಕ್ಷಮೆ ಯಾಚಿಸಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಎ. ಕೆ. ಮೆನನ್ ನೇತೃತ್ವದ ದೆಹಲಿ ಹೈಕೋರ್ಟ್ ಏಕ ಸದಸ್ಯ ಪೀಠ ಪಾಯಲ್ ಘೋಶ್ ಕ್ಷಮೆಯನ್ನ ಸ್ವೀಕರಿಸಿದೆ. ಈ ಮೂಲಕ ರಿಚಾ ಚಡ್ಡಾಗೆ ದೆಹಲಿ ಹೈಕೋರ್ಟ್ನಲ್ಲಿ ಜಯ ಸಿಕ್ಕಂತಾಗಿದೆ.
ಕೆಲ ದಿನಗಳ ಹಿಂದಷ್ಟೇ ಅನುರಾಗ್ ಕಶ್ಯಪ್ ವಿರುದ್ಧ ಮಿಟೂ ಆರೋಪ ಹೊರಿಸಿದ್ದ ನಟಿ ಪಾಯಲ್ ಘೋಶ್ ರಿಚಾ ಚಡ್ಡಾ ಅವರ ಹೆಸರನ್ನ ಬಳಕೆ ಮಾಡಿಕೊಂಡಿದ್ದರು. ಇದರಿಂದ ಕೆರಳಿದ್ದ ರಿಚಾ ಮಿಸ್ ಘೋಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿಂದೆ ಕ್ಷಮೆ ಕೇಳಲು ನಿರಾಕರಿಸಿದ್ದ ಪಾಯಲ್ ಘೋಶ್ ಇದೀಗ ರಿಚಾ ಬಗೆಗಿನ ತಮ್ಮ ಎಲ್ಲ ಹೇಳಿಕೆಗಳನ್ನ ವಾಪಸ್ ಪಡೆದು ಬೇಷರತ್ ಕ್ಷಮೆ ಯಾಚಿಸಿದ್ದಾರೆ.