ಹೊಸ ವರ್ಷದ ಪ್ರಯುಕ್ತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಸದ್ಯ ತಮ್ಮ ಪತಿ ರಣವೀರ್ ಸಿಂಗ್ ಜೊತೆ ರಾಜಸ್ಥಾನದ ಜೈಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ನಟಿ ತೆಗೆದುಕೊಂಡಿರುವ ಈ ಕ್ರಮ ಎಲ್ಲರನ್ನ ಆಶ್ಚರ್ಯಗೊಳಿಸಿದೆ.
2021ಕ್ಕೆ ಕಾಲಿಟ್ಟ ಪ್ರಯುಕ್ತ ದೀಪಿಕಾ ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮದ ಎಲ್ಲಾ ಖಾತೆಗಳಲ್ಲಿ ತಾವು ಮಾಡಿದ್ದ ಪೋಸ್ಟ್ಗಳನ್ನ ಡಿಲೀಟ್ ಮಾಡಿದ್ದಾರೆ. ಅಭಿಮಾನಿಗಳಿಗಾಗಿ ಆಡಿಯೋ ಡೈರಿಯೊಂದನ್ನ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ತಮ್ಮ ಪ್ರೊಫೈಲ್ ಫೋಟೋಗಳನ್ನ ನಟಿ ಬದಲಾಯಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಪೋಸ್ಟ್ಗಳನ್ನ ಸ್ವತಃ ದೀಪಿಕಾ ಪಡುಕೋಣೆ ಡಿಲೀಟ್ ಮಾಡಿದ್ದಾರಾ ಇಲ್ಲವೇ ಹ್ಯಾಕರ್ಸ್ ಕಾಟವಾ ಎಂಬುದು ಇನ್ನೂ ದೃಢವಾಗಿಲ್ಲ. ಅಥವಾ ತಮ್ಮ ಮುಂಬರುವ ಸಿನಿಮಾದ ಪಬ್ಲಿಸಿಟಿಗಾಗಿ ಈ ರೀತಿ ಮಾಡಿದ್ದಾರಾ ಎಂಬ ಪ್ರಶ್ನೆಯೂ ಮೂಡಿದೆ.
https://www.instagram.com/p/CJfiMikHv54/?utm_source=ig_web_copy_link