alex Certify ಈ ಕಾರಣಕ್ಕೆ ಬದಲಾಯ್ತು ದೀಪಿಕಾಳ ಟ್ವಿಟ್ಟರ್ ಖಾತೆ ಹೆಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಬದಲಾಯ್ತು ದೀಪಿಕಾಳ ಟ್ವಿಟ್ಟರ್ ಖಾತೆ ಹೆಸರು…!

ಬಾಲಿವುಡ್​ನ ಖ್ಯಾತ ನಿರ್ದೇಶಕಿ ಫರಾ ಖಾನ್​​ ಆಕ್ಷನ್​ ಕಟ್​ ಹೇಳಿದ್ದ ಸಿನಿಮಾ ‘ಓಂ ಶಾಂತಿ ಓಂಂ’ ಈಗ 13 ವರ್ಷವನ್ನ ಪೂರೈಸಿದೆ.

2007ರಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಕಿಂಗ್​ ಖಾನ್​ ಶಾರೂಖ್​ ಖಾನ್​ ಈ ಸಿನಿಮಾದ ಹೀರೋ ಆಗಿ ಕಾಣಿಸಿಕೊಂಡಿದ್ರೆ ಕನ್ನಡತಿ ದೀಪಿಕಾ ಪಡುಕೋಣೆ ಈ ಫಿಲಂ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು.

ಅದಾದ ಬಳಿಕ ದೀಪಿಕಾ ಬಾಲಿವುಡ್​ನಲ್ಲಿ ಕಾಣಿಸಿಕೊಂಡ ಹೆಚ್ಚು ಕಡಿಮೆ ಎಲ್ಲ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಹಿಟ್​ ಆಗಿವೆ.

ಈಗ ಬಾಲಿವುಡ್​ನಲ್ಲಿ 13 ವರ್ಷದ ಸಿನಿಜರ್ನಿಯನ್ನ ಸಾಗಿಸಿರುವ ದೀಪಿಕಾ, ಇದರ ಸವಿನೆನಪಿಗಾಗಿ ತಮ್ಮ ಟ್ವಿಟರ್​ ಹೆಸರನ್ನ ಶಾಂತಿ ಪ್ರಿಯಾ ಎಂದು ಬದಲಾಯಿಸಿಕೊಂಡಿದ್ದಾರೆ.

ಅಂದ ಹಾಗೆ ಈ ಸಿನಿಮಾದಲ್ಲಿ ದೀಪಿಕಾ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶಾಂತಿ ಪ್ರಿಯಾ ಹಾಗೂ ಸಂಧ್ಯಾ ಎಂಬ ಎರಡೂ ಪಾತ್ರವನ್ನ ಅದ್ಭುತವಾಗಿ ನಿರ್ಮಿಸಿ ಜನರ ಮನ ಗೆದ್ದಿದ್ದರು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...