alex Certify BIG NEWS: ಡ್ರಗ್ಸ್‌ ಜಾಲದಲ್ಲಿ ಮತ್ತೊಬ್ಬ ಖ್ಯಾತ ನಟಿ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರಗ್ಸ್‌ ಜಾಲದಲ್ಲಿ ಮತ್ತೊಬ್ಬ ಖ್ಯಾತ ನಟಿ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಳಿಕ ಬಾಲಿವುಡ್‌ ಚಿತ್ರರಂಗದಲ್ಲಿ ಡ್ರಗ್ಸ್‌ ಜಾಲದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್‌ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್‌ ಚಕ್ರವರ್ತಿ ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದಾರೆ.

ವಿಚಾರಣೆ ವೇಳೆ ರಿಯಾ ಚಕ್ರವರ್ತಿ ಮತ್ತಿಬ್ಬರು ನಟಿಯರಾದ ಶ್ರದ್ದಾ ಕಪೂರ್‌ ಹಾಗೂ ಸಾರಾ ಆಲಿಖಾನ್‌ ಹೆಸರು ಬಾಯ್ಬಿಟ್ಟಿರುವುದಾಗಿ ಹೇಳಲಾಗಿದ್ದು, ಸದ್ಯದಲ್ಲೇ ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ಈ ಇಬ್ಬರ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇತ್ತ ಕನ್ನಡ ಚಿತ್ರರಂಗವೂ ಸಹ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತತ್ತರಿಸಿ ಹೋಗಿದ್ದು, ಈಗಾಗಲೇ ನಟಿಯರಾದ ರಾಗಿಣಿ ಹಾಗೂ ಸಂಜನಾ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾರೆ. ಇದೀಗ ಕರ್ನಾಟಕ ಮೂಲದ ಬಾಲಿವುಡ್‌ ನ ಖ್ಯಾತ ನಟಿಯೊಬ್ಬರ ಹೆಸರು ಡ್ರಗ್ಸ್‌ ಜಾಲದಲ್ಲಿ ಕೇಳಿ ಬಂದಿದ್ದು, ಅಚ್ಚರಿ ಮೂಡಿಸಿದೆ.

ಹೌದು, ನಟಿ ದೀಪಿಕಾ ಪಡುಕೋಣೆ ಸಹ ಡ್ರಗ್ಸ್‌ ಜಾಲದ ಜೊತೆ ಸಂಪರ್ಕ ಹೊಂದಿದ್ದರೆಂದು ಹೇಳಲಾಗಿದ್ದು, ಆಕೆ ʼಕೆʼ ಎಂಬ ವ್ಯಕ್ತಿ ಜೊತೆ ಡ್ರಗ್ಸ್‌ ಗಾಗಿ ಬೇಡಿಕೆ ಸಲ್ಲಿಸಿರುವುದು ವಾಟ್ಸಾಪ್‌ ಚಾಟ್‌ ನಲ್ಲಿ ಬಹಿರಂಗವಾಗಿದೆ. ದೀಪಿಕಾ ಜೊತೆ ಇನ್ನಷ್ಟು ಬಾಲಿವುಡ್‌ ಘಟಾನುಘಟಿ ನಟ-ನಟಿಯರ ಹೆಸರು ಬಹಿರಂಗವಾಗಲಿದೆ ಎನ್ನಲಾಗಿದ್ದು, ಇವರೆಲ್ಲರಿಗೂ ನೋಟೀಸ್‌ ನೀಡಿ ವಿಚಾರಣೆ ನಡೆಸಲು ಎನ್.ಸಿ.ಬಿ. ಸಿದ್ದತೆ ನಡೆಸಿದೆ.

ಅಕ್ಟೋಬರ್‌ 28, 2017 ರಂದು ದೀಪಿಕಾ ನಡೆಸಿರುವ ವಾಟ್ಸಾಪ್‌ ಸಂಭಾಷಣೆಯ ವಿವರ ಇಂತಿದೆ.

At 10:03 AM, (+91-992——-) ‘D’ writes: K…Maal you have?

At 10:05 AM, (+91-961——-) ‘K’ writes: I have but at home. I am at Bandra…

At 10:05, K writes: I can ask Amit if you want

At 10:07, Deepika writes: Yes!! Pllleeeeasssee

At 10:08, K writes: Amit has. He’s carrying it

At 10:12, Deepika  writes: Hash na?

At 10:12, Deepika writes: Not weed

At 10:14, K writes: What time are you coming to Koko

At 10:15: Deepika writes: 1130/12ish

At 10:15: Deepika writes: Till what time is Shal there?

K writes: I think she said 11:30 because she needs to at the other place at 12

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...