2003ರಲ್ಲಿ ಬಿಡುಗಡೆಯಾದ ʼಮುನ್ನಾಭಾಯ್ ಎಂಬಿಬಿಎಸ್ʼ ಚಿತ್ರದ ಸರ್ಕೀಟ್ ಪಾತ್ರ ಯಾರಿಗೆ ತಾನೇ ಮರೆತುಹೋಗಲು ಸಾಧ್ಯ..? 17 ವರ್ಷಗಳು ಕಳೆದರೂ ಸಹ ಈಗಲೂ ಈ ಸರ್ಕೀಟ್ ಆನ್ಲೈನ್‌ನಲ್ಲಿ ಅನೇಕ ಮೀಮ್‌ಗಳಿಗೆ ಸ್ಪೂರ್ತಿಯಾಗಿದ್ದಾನೆ.
ಕೇರಳ ಸ್ಟೈಲ್ ಮಟನ್ ಫ್ರೈ ರೆಸಿಪಿ
ಚಿತ್ರದಲ್ಲಿ ಮುನ್ನಾಭಾಯ್ ಡಾ. ಸುಮನ್‌ರನ್ನು ಮದುವೆಯಾದರೆ, ಸರ್ಕೀಟ್ ಸಹ ಮದುವೆಯಾಗಿದ್ದು ಆತನಿಗೊಬ್ಬ ಮಗನೂ ಇದ್ದಾನೆ ಎಂದು ಚಿತ್ರದ ಎಂಡ್ ಕ್ರೆಡಿಟ್‌ನಂತೆ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಭಾರೀ ವೈರಲ್ ಆಗಿದೆ.
ಟೈಮ್ಸ್ ಸ್ಕ್ವೇರ್ ನಲ್ಲಿ ನಡೆದ ಘಟನೆಯಿಂದ ತಬ್ಬಿಬ್ಬಾದ ಜನ
ಮುನ್ನಾ ಮೆಡಿಕಲ್ ವ್ಯಾಸಂಗ ಮಾಡಿದ ಕಾಲೇಜಿನಲ್ಲಿ ನರ್ಸ್ ಆಗಿದ್ದ ಅದೇ ಮಹಿಳೆಯನ್ನು ಸರ್ಕೀಟ್ ಮದುವೆಯಾಗಿದ್ದಾನೆ ಎಂದು ಮೀಮ್ ಒಂದನ್ನು ಮಾಡಲಾಗಿದ್ದು, ಅದೀಗ ವೈರಲ್ ಆಗಿ ಭಾರೀ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.