alex Certify ಚಂದನ್ ಶೆಟ್ಟಿ ಹಾಡಿಗೆ ಕೆನಡಾದಲ್ಲಿ ಚಿತ್ರೀಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದನ್ ಶೆಟ್ಟಿ ಹಾಡಿಗೆ ಕೆನಡಾದಲ್ಲಿ ಚಿತ್ರೀಕರಣ

ಗಾಯಕ ಹಾಗೂ ಗೀತರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್‌ ’ಸಲಿಗೆ’ ಗುರುವಾರಂದು ಬಿಡುಗಡೆಯಾಗಲಿದ್ದು, ಇದಕ್ಕಾಗಿ ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡಲಾಗಿದೆ.

“2019ರಲ್ಲೇ ಕಾಂಪೋಸ್ ಮಾಡಲಾಗಿದ್ದ ಸಲಿಗೆ ಈ ಕಾಲದ ಫಂಕ್ ಆಗಿದ್ದು, ಕನ್ನಡದಲ್ಲಿ ಈ ಹಿಂದೆ ಇಂಥ ಪ್ರಯೋಗ ಎಂದೂ ಮಾಡಿಲ್ಲ. ಹೀಗಾಗಿ ಹಾಡನ್ನು ಬಿಡುಗಡೆ ಮಾಡಲು ನಾನು ಬಹಳ ಹಿಂದುಮುಂದು ನೋಡುತ್ತಿದ್ದೆ. 2019ರಲ್ಲಿ ಕೆನಡಾಗೆ ಟೂರ್‌ ಮಾಡಿದ ವೇಳೆ ಖುದ್ದು ನಾನೇ ಶೂಟಿಂಗ್ ಮಾಡಿಕೊಂಡು ಎಡಿಟ್ ಮಾಡಲು ನಿರ್ಧರಿಸಿದೆ. ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿದ್ದು, ಆ ವೇಳೆ ಅಲ್ಲಿ ಚಳಿಗಾಲದ ಹಿಮಪಾತವಿತ್ತು.

ಈ ವಿಡಿಯೋ ಹಾಗೂ ಹಾಡುಗಳು ನನಗೆ ಪ್ರಯೋಗಗಳಾಗಿವೆ. ನನ್ನ ಹಿಂದಿನ ಹಾಡನ್ನು ಪಬ್‌ಗಳು, ಕಾರುಗಳು ಹಾಗೂ ವಿಲ್ಲಾಗಳಲ್ಲಿ ಶೂಟ್ ಮಾಡಲಾಗಿತ್ತು. ಆದರೆ ಈ ಹಾಡನ್ನು ಹೊರಗಡೆ ಶೂಟ್ ಮಾಡಲಾಗಿದೆ. ಇದು ಶೂನ್ಯ-ಬಜೆಟ್ ಹಾಡು,” ಎಂದು ಚಂದನ್ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.

ಕೊಹ್ಲಿ ಕ್ರಾಸ್‌‌ ಬಾರ್‌ ಕಿಕ್ ಗೆ ನಿಬ್ಬೆರಗಾದ ಭಾರತ ಫುಟ್ಬಾಲ್ ತಂಡದ ನಾಯಕ

“ಕಳೆದೊಂದು ವರ್ಷದಿಂದ ಕೋವಿಡ್-19 ಕಾರಣದಿಂದ ಕಲಾವಿದರು ಸಂಕಷ್ಟದಲ್ಲಿರುವ ಈ ಘಳಿಗೆಯಲ್ಲಿ ನಮಗೆ ಲೈವ್‌ ಕನ್ಸರ್ಟ್‌ಗಳನ್ನು ನಡೆಸಲು ಆಗುತ್ತಿಲ್ಲ. ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗಿರುವ ಅಗತ್ಯವಿರುವ ಕಾರಣ ಲಾಕ್‌ಡೌನ್ ಅವಧಿಯಲ್ಲಿ ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ,” ಎಂದು ಚಂದನ್ ಇದೇ ವೇಳೆ ತಿಳಿಸಿದ್ದಾರೆ.

ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್‌ ಖರೀದಿಸಲು ಮುಂದಾಗಿದ್ದೀರಾ…? ಹಾಗಾದ್ರೆ ಈ ಮಾಡೆಲ್‌ ಗಳನ್ನೊಮ್ಮೆ ನೋಡಿ

ಚಂದನ್‌ ಅವರು ನಂದ ಕಿಶೋರ್‌ ನಿರ್ದೇಶನದ ಧೃವ ಸರ್ಜಾರ ಮುಂದಿನ ಚಿತ್ರಕ್ಕೆ ಹಾಡುಗಳನ್ನು ಕಾಂಪೋಸ್ ಮಾಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...