ಹೆಸರಿನ ಮೂಲಕವೇ ವಿವಾದ ಸೃಷ್ಟಿಸಿದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾ ಲಕ್ಷ್ಮೀ ಬಾಂಬ್. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುತ್ತಿರುವ ಈ ಚಿತ್ರದ ಹೆಸರನ್ನ ಬದಲಾವಣೆ ಮಾಡಬೇಕು ಅಂತಾ ಅನೇಕರು ಚಿತ್ರತಂಡದ ಮೇಲೆ ಒತ್ತಡ ಹೇರ್ತಾನೆ ಇದ್ದಾರೆ.
ವಿವಾದಗಳ ನಡುವೆಯೂ ಚಿತ್ರತಂಡ ಇಂದು (ಸೋಮವಾರ ) ಸಂಜೆ 7.30ಕ್ಕೆ ಡಿಸ್ನಿ + ಹಾಟ್ಸ್ಟಾರ್ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧವಾಗಿದೆ. ಆದರೆ ಇತ್ತ ಅಕ್ಷಯ್ ಕುಮಾರ್ ಪತ್ನಿ ನಟಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಲಕ್ಷ್ಮೀ ಬಾಂಬ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನೀಲಿ ಬಣ್ಣದ ಮುಖದ ಮೇಲೆ ಕೆಂಪು ಬಣ್ಣದ ಕುಂಕುಮವಿಟ್ಟು ತೃತೀಯ ಲಿಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ಅದೇ ರೀತಿ ಟ್ವಿಂಕಲ್ ಫೋಟೋವನ್ನೂ ಎಡಿಟ್ ಮಾಡಿದ ಟ್ರೋಲಿಗರು ಟ್ವಿಂಕಲ್ ಬಾಂಬ್ ಎಂದು ಕ್ಯಾಪ್ಶನ್ ಕೊಟ್ಟು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.
ಟ್ರೋಲಿಗರ ಈ ಹುಚ್ಚಾಟ ಕಂಡು ಗರಂ ಆದ ಟ್ವಿಂಕಲ್, ಈ ಫೋಟೋವನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಯಾರೋ ಒಬ್ಬ ವ್ಯಕ್ತಿ ನನಗೆ ಈ ಫೋಟೋವನ್ನ ಟ್ಯಾಗ್ ಮಾಡುವ ಮೂಲಕ ಥರ್ಡ್ ಕ್ಲಾಸ್ ಮಹಿಳೆ ಎಂದು ಹೇಳಿದ್ದಾನೆ. ನೀವು ದೇವರಿಗೆ ತಮಾಷೆ ಮಾಡ್ತಿಯಾ ಎಂದು ಬರೆದುಕೊಂಡಿದ್ದಾನೆ. ದೇವರು ಒಳ್ಳೆ ರೀತಿಯ ತಮಾಷೆಗಳನ್ನ ಇಷ್ಟಪಡ್ತಾನೆ. ಇಲ್ಲದಿದ್ರೆ ಆ ದೇವರು ನಿಮ್ಮನ್ನ ಭೂಮಿಗೆ ಕಳಿಸ್ತಾನೇ ಇರಲಿಲ್ಲ ಅಂತಾ ಟಾಂಗ್ ನೀಡಿದ್ದಾರೆ.