ಕೊರೊನಾ ವೈರಸ್ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಸಿನಿಮಾ ಮಂದಿರವನ್ನ ಬಂದ್ ಮಾಡಿದ್ದವು. ಸಿನಿಮಾ ನೋಡೋಕೆ ಜನರೇ ಇಲ್ಲ ಅಂದಮೇಲೆ ಮಲ್ಟಿಫ್ಲೆಕ್ಸ್ಗಳಲ್ಲಿ ಮಾರಾಟಕ್ಕಿರುವ ಪಾಪ್ಕಾರ್ನ್ಗಳನ್ನ ಖರೀದಿ ಮಾಡೋರು ಯಾರು ಅಲ್ವಾ..?
ಆದರೆ ಇಂತಹ ಒಂದು ಸಮಸ್ಯೆಗೆ ಪರಿಹಾರ ಹುಡುಕಿರುವ ಬೆಲ್ಜಿಯಂ ಸಿನಿಮಾ ಗ್ರೂಪ್ ಮೂವಿ ಟಿಕೆಟ್ ಇಲ್ಲದೆಯೂ ಪಾಪ್ ಕಾರ್ನ್ ಮಾರಾಟ ಮಾಡೋಕೆ ಮುಂದಾಗಿದೆ. ಇದರಿಂದ ಆದರೂ ಕೊಂಚ ಹಣ ಗಳಿಸುವ ಪ್ಲಾನ್ ಹೊಂದಿದೆ.
ಯುರೋಪ್ನಲ್ಲಿ 100ಕ್ಕೂ ಹೆಚ್ಚು ಥಿಯೇಟರ್ಗಳನ್ನ ಹೊಂದಿರುವ ಕಿನೆಪೊಲಿಸ್, 13 ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ 68 ಪ್ರತಿಶತ ನಷ್ಟ ಕಂಡಿರೋದಾಗಿ ಹೇಳಿಕೊಂಡಿದೆ.
ಬೆರಗಾಗಿಸುತ್ತೆ 81 ವರ್ಷದ ವೃದ್ದೆ ಫಿಟ್ ನೆಸ್ ಗೋಲ್
ಇನ್ನು ಈ ವಿಚಾರವಾಗಿ ಮಾತನಾಡಿದ ಸಿನಿ ಮಂದಿರದ ಸಿಇಓ ಎಡ್ಡಿ ಡುಕ್ವೇನ್, ಈ ನಷ್ಟವನ್ನ ತುಂಬಲು ಸಾಕಷ್ಟು ಹೊಸ ಮಾರ್ಗಗಳನ್ನ ಹುಡುಕುತ್ತಿದ್ದೇವೆ. ಇದರ ಒಂದು ಹಂತವಾಗಿ ಊಬರ್ ಈಟ್ಸ್ ಮೂಲಕ ಪಾಪ್ ಕಾರ್ನ್ ಡೆಲಿವರಿ ಆರಂಭಿಸಿದ್ದೇವೆ ಎಂದು ಹೇಳಿದ್ರು.
ಕೆನಡಾದ ಗ್ರಾಹಕರೊಬ್ಬರು ಮೂವಿ ಟಿಕೆಟ್ ಇಲ್ಲದವರಿಗೆ ಪಾಪ್ ಕಾರ್ನ್ ನೀಡುತ್ತೀರಾ ಎಂದು ಕೇಳಿದ ಬಳಿಕ ಈ ಪ್ಲಾನ್ ಹೊಳೆದಿದೆಯಂತೆ. ಆಕೆ ಮೂವಿ ಟಿಕೆಟ್ ಇಲ್ಲದೆಯೇ ಪಾಪ್ ಕಾರ್ನ್ ಖರೀದಿ ಮಾಡಲು ಬಯಸಿದ್ದಾಳೆ ಅಂದಮೇಲೆ ನಾವೇಕೆ ಹೋಮ್ ಡೆಲಿವರಿ ಮಾಡಬಾರದು ಎಂದು ನಿರ್ಧರಿಸಿದ್ವಿ ಅಂತಾ ಎಡ್ಡಿ ಹೇಳಿದ್ದಾರೆ.