ಕೃತಿಸ್ವಾಮ್ಯ ದೂರಿನ ವಿಚಾರವಾಗಿ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ಮುಂಬೈ ಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ದಿಡ್ಡಾ: ದಿ ವಾರಿಯರ್ ಆಫ್ ಕಾಶ್ಮೀರ್ ಕೃತಿಯ ಕರ್ತೃ ಆಶಿಶ್ ಕೌಲ್ ಎಂಬುವರು ಕಂಗನಾ ರಣಾವತ್ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆ ಆರೋಪ ಹೊರಿಸಿದ್ದರು.
ಜಮೀನು ದಾರಿ ವಿವಾದ: ನಟ ಯಶ್ ವಿರುದ್ಧ ಜಿಲ್ಲಾಧಿಕಾರಿಗೆ ರೈತರ ದೂರು
ಕಾಶ್ಮೀರದ ರಾಣಿಯಾಗಿದ್ದ ದಿಡ್ಡಾ ಜೀವನ ಚರಿತ್ರೆಯ ವಿಶೇಷ ಹಕ್ಕುಸ್ವಾಮ್ಯಗಳು ಅವರು ಹೊಂದಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಕಂಗನಾ ಅವರು ಯಾವ ರೀತಿ ಹಕ್ಕುಸ್ವಾಮ್ಯ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ವಿಚಾರದಲ್ಲಿ ಮಾತನಾಡಿರುವ ಖರ್ ಪೊಲೀಸರು ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.